ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿನ ಟಿಪ್ಪಣಿ ಆ್ಯಪ್‌ನ ವ್ಯೂ ಅನ್ನು ಬದಲಾಯಿಸುವುದು

ಟಿಪ್ಪಣಿ ಆ್ಯಪ್‌ನಲ್ಲಿ ನಿಮ್ಮ ಟಿಪ್ಪಣಿಗಳು ಹೇಗೆ ಕಾಣಿಸಿಕೊಳ್ಳುತ್ತವೆ ಎಂಬುದನ್ನು ನೀವು ಬದಲಾಯಿಸಬಹುದು. ನಿಮ್ಮ ಟಿಪ್ಪಣಿಗಳಿಗೆ ಸಾಲುಗಳು ಅಥವಾ ಗ್ರಿಡ್‌ಗಳನ್ನು ಸೇರಿಸಿ, ನಿಮ್ಮ ಟಿಪ್ಪಣಿಗಳನ್ನು ಪಟ್ಟಿ ಅಥವಾ ಗ್ಯಾಲರಿಯಾಗಿ ವೀಕ್ಷಿಸಿ ಮತ್ತು ಎಲ್ಲಾ ಅಟ್ಯಾಚ್‌ಮೆಂಟ್‌ಗಳನ್ನು ಒಂದೇ ಸ್ಥಳದಲ್ಲಿ ನೋಡಿ.

ನಿಮ್ಮ iPadನಲ್ಲಿ ಟಿಪ್ಪಣಿ ಆ್ಯಪ್‌ನ ಡಿಸ್‌ಪ್ಲೇಯನ್ನು ಬದಲಾಯಿಸುವುದು

  • ಟಿಪ್ಪಣಿಯನ್ನು ಫುಲ್‌ಸ್ಕ್ರೀನ್‌ನಲ್ಲಿ ನೋಡಿ: ಲ್ಯಾಂಡ್‌ಸ್ಕೇಪ್ ಓರಿಯೆಂಟೇಷನ್‌ನಲ್ಲಿ ಟಿಪ್ಪಣಿಯನ್ನು ನೋಡುವಾಗ ಪೂರ್ಣ ಸ್ಕ್ರೀನ್ ಅನ್ನು ಪ್ರವೇಶಿಸಿ ಬಟನ್ ಅನ್ನು ಟ್ಯಾಪ್ ಮಾಡಿ ಅಥವಾ iPad ಅನ್ನು ಪೋರ್ಟ್ರೇಟ್ ಓರಿಯೆಂಟೇಷನ್‌ಗೆ ತಿರುಗಿಸಿ.

  • ನಿಮ್ಮ ಖಾತೆಗಳು, ಟಿಪ್ಪಣಿಗಳ ಪಟ್ಟಿ ಮತ್ತು ಆಯ್ಕೆಮಾಡಿದ ಟಿಪ್ಪಣಿಯನ್ನು ಏಕಕಾಲದಲ್ಲಿ ನೋಡಿ: ಲ್ಯಾಂಡ್‌ಸ್ಕೇಪ್ ಓರಿಯಂಟೇಶನ್‌ಗೆ iPad ಅನ್ನು ತಿರುಗಿಸಿ, ನಂತರ ಸೈಡ್‌ಬಾರ್ ತೋರಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

ಟಿಪ್ಪಣಿಗಳಲ್ಲಿ ಸಾಲುಗಳು ಅಥವಾ ಗ್ರಿಡ್‌ಗಳನ್ನು ತೋರಿಸಿ

  • ಅಸ್ತಿತ್ವದಲ್ಲಿರುವ ಟಿಪ್ಪಣಿಯಲ್ಲಿ: ಟಿಪ್ಪಣಿ ಆ್ಯಕ್ಷನ್‌ಗಳ ಬಟನ್ ಅನ್ನು ಟ್ಯಾಪ್ ಮಾಡಿ (ಮೇಲಿನ ಬಲ ಮೂಲೆಯಲ್ಲಿ), ಸಾಲುಗಳು ಮತ್ತು ಗ್ರಿಡ್‌ಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ ಶೈಲಿಯನ್ನು ಆರಿಸಿ.

  • ಎಲ್ಲಾ ಹೊಸ ಟಿಪ್ಪಣಿಗಳಲ್ಲಿ: ಸೆಟ್ಟಿಂಗ್ ‌ಆ್ಯಪ್  > ಆ್ಯಪ್‌ಗಳು > ಟಿಪ್ಪಣಿಗಳು ಎಂಬಲ್ಲಿಗೆ ಹೋಗಿ, ನಂತರ ಸಾಲುಗಳು ಮತ್ತು ಗ್ರಿಡ್‌ಗಳು ಎಂಬುದನ್ನು ಟ್ಯಾಪ್ ಮಾಡಿ.

ಟಿಪ್ಪಣಿಗಳನ್ನು ಪಟ್ಟಿ ಅಥವಾ ಗ್ಯಾಲರಿಯಾಗಿ ವೀಕ್ಷಿಸಿ

ಟಿಪ್ಪಣಿಗಳ ಪಟ್ಟಿಯಲ್ಲಿ ಫೋಲ್ಡರ್ ಆ್ಯಕ್ಷನ್‌ಗಳ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ‘ಪಟ್ಟಿಯಾಗಿ ನೋಡಿ’ ಅಥವಾ ‘ಗ್ಯಾಲರಿಯಾಗಿ ನೋಡಿ’ ಎಂಬುದನ್ನು ಟ್ಯಾಪ್ ಮಾಡಿ.

ಎಲ್ಲಾ ಅಟ್ಯಾಚ್‌ಮೆಂಟ್‌ಗಳನ್ನು ನೋಡಿ

ಟಿಪ್ಪಣಿಗಳ ಪಟ್ಟಿಯಲ್ಲಿ ಫೋಲ್ಡರ್ ಆ್ಯಕ್ಷನ್‌ಗಳ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಅಟ್ಯಾಚ್‌ಮೆಂಟ್‌ಗಳನ್ನು ನೋಡಿ ಎಂಬುದನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.