ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ ಫೋಟೋ ಅಥವಾ ವೀಡಿಯೊದಲ್ಲಿನ ಕಂಟೆಂಟ್‌ನೊಂದಿಗೆ ಸಂವಹನ ನಡೆಸಲು ಲೈವ್ ಪಠ್ಯವನ್ನು ಬಳಸುವುದು

ನೀವು ಆನ್‌ಲೈನ್‌ನಲ್ಲಿ ಕಾಣುವ ನಿಮ್ಮ ಫೋಟೋಗಳು, ವೀಡಿಯೊಗಳು ಮತ್ತು ಚಿತ್ರಗಳಲ್ಲಿನ ಪಠ್ಯವನ್ನು ಲೈವ್ ಪಠ್ಯವು ಗುರುತಿಸುತ್ತದೆ. ನೀವು ಈ ಪಠ್ಯದೊಂದಿಗೆ ಹಲವು ರೀತಿಗಳಲ್ಲಿ ಸಂವಹನ ನಡೆಸಬಹುದು. ನೀವು ಪಠ್ಯವನ್ನು ಆರಿಸಿಕೊಂಡು ಕಾಪಿ ಮಾಡಿಬಹುದು, ಹಂಚಿಕೊಳ್ಳಬಹುದು ಅಥವಾ ಅನುವಾದಿಸಬಹುದು ಅಥವಾ ಫೋನ್ ಕರೆ ಮಾಡಲು, ವೆಬ್‌ಸೈಟ್ ಅನ್ನು ತೆರೆಯಲು ಅಥವಾ ಕರೆನ್ಸಿಗಳನ್ನು ಪರಿವರ್ತಿಸಲು ನೀವು ತ್ವರಿತ ಆ್ಯಕ್ಷನ್‌ಗಳನ್ನು ಬಳಸಬಹುದು.

ಲೈವ್ ಪಠ್ಯವು ಬೆಂಬಲಿತ ಮಾಡಲ್‌ಗಳಲ್ಲಿ ಲಭ್ಯವಿದ್ದು, ಅದನ್ನು Safari, ಫೋಟೋಸ್ ಆ್ಯಪ್, ಕ್ಯಾಮರಾ, ತ್ವರಿತ ನೋಟ ಮತ್ತು ಇತ್ಯಾದಿಗಳಲ್ಲಿ ಬಳಸಬಹುದು.

ಲೈವ್ ಪಠ್ಯವನ್ನು ಆನ್ ಮಾಡಿ

ಲೈವ್ ಪಠ್ಯವನ್ನು ಬಳಸಲು ಪ್ರಾರಂಭಿಸುವ ಮೊದಲು, ಎಲ್ಲಾ ಬೆಂಬಲಿತ ಭಾಷೆಗಳಲ್ಲಿ ಇದು ಆನ್ ಆಗಿದೆ ಎಂಬುದನ್ನು ಖಚಿತಪಡಿಸಿಕೊಳ್ಳಿ.

  1. ಸೆಟ್ಟಿಂಗ್ಸ್ ಆ್ಯಪ್  > ಸಾಮಾನ್ಯ > ಭಾಷೆ ಮತ್ತು ಪ್ರದೇಶ ಎಂಬಲ್ಲಿಗೆ ಹೋಗಿ.

  2. ಲೈವ್ ಪಠ್ಯವನ್ನು ಆನ್ ಮಾಡಿ.

ಫೋಟೋ ಅಥವಾ ವೀಡಿಯೊದಲ್ಲಿನ ಪಠ್ಯವನ್ನು ಕಾಪಿ ಮಾಡಿ, ಅನುವಾದಿಸಿ ಮತ್ತು ಹುಡುಕಿ

  1. ಪಠ್ಯವನ್ನು ಒಳಗೊಂಡಿರುವ ಫೋಟೋವನ್ನು ತೆರೆಯಿರಿ ಅಥವಾ ವೀಡಿಯೊವನ್ನು ವಿರಾಮಗೊಳಿಸಿ.

  2. ಪಠ್ಯವನ್ನು ಗುರುತಿಸಿ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಆಯ್ಕೆಮಾಡಿದ ಪಠ್ಯವನ್ನು ಒತ್ತಿ ಹಿಡಿದುಕೊಳ್ಳಿ.

  3. ನಿರ್ದಿಷ್ಟ ಪಠ್ಯವನ್ನು ಆಯ್ಕೆಮಾಡಲು ಗ್ರ್ಯಾಬ್ ಪಾಯಿಂಟ್‌ಗಳನ್ನು ಬಳಸಿ, ನಂತರ ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಮಾಡಿ:

    • ಪಠ್ಯವನ್ನು ಕಾಪಿ ಮಾಡಿ: ಟಿಪ್ಪಣಿ ಅಥವಾ ಸಂದೇಶದಂತಹ ಮತ್ತೊಂದು ಆ್ಯಪ್‌ನಲ್ಲಿ ಪೇಸ್ಟ್ ಮಾಡಲು ಪಠ್ಯವನ್ನು ಕಾಪಿ ಮಾಡಿ.

    • ಎಲ್ಲವನ್ನೂ ಆಯ್ಕೆಮಾಡಿ: ಫ್ರೇಮ್‌ನಲ್ಲಿರುವ ಎಲ್ಲಾ ಪಠ್ಯವನ್ನು ಆಯ್ಕೆಮಾಡಿ.

    • ಲುಕ್ ಅಪ್: ವೈಯಕ್ತಿಕಗೊಳಿಸಿದ ವೆಬ್ ಸಲಹೆಗಳನ್ನು ತೋರಿಸಿ.

    • ಅನುವಾದ: ಪಠ್ಯವನ್ನು ಅನುವಾದಿಸಿ.

    • ವೆಬ್‌ನಲ್ಲಿ ಹುಡುಕಿ ಆಯ್ಕೆಮಾಡಿದ ಪಠ್ಯವನ್ನು ವೆಬ್‌ನಲ್ಲಿ ಹುಡುಕಿ.

    • ಹಂಚಿಕೆ: AirDrop, ಸಂದೇಶ ಆ್ಯಪ್, Mail ಅಥವಾ ಲಭ್ಯವಿರುವ ಇತರ ಆಯ್ಕೆಗಳನ್ನು ಬಳಸಿ ಪಠ್ಯವನ್ನು ಹಂಚಿಕೊಳ್ಳಿ.

  4. ಫೋಟೋ ಅಥವಾ ವೀಡಿಯೊಗೆ ಮರಳಲು ಪಠ್ಯವನ್ನು ಗುರುತಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

ತ್ವರಿತ ಆ್ಯಕ್ಷನ್‌ಗಳ ಮೂಲಕ ಫೋಟೋ ಅಥವಾ ವೀಡಿಯೊದೊಳಗೆ ಕಾರ್ಯಗಳನ್ನು ನಿರ್ವಹಿಸಿ

ಫೋಟೋ ಅಥವಾ ವೀಡಿಯೊದ ಕಂಟೆಂಟ್ ಅನ್ನು ಆಧರಿಸಿ ಕೆಳಭಾಗದಲ್ಲಿರುವ ತ್ವರಿತ ಆ್ಯಕ್ಷನ್ ಒಂದನ್ನು ಟ್ಯಾಪ್ ಮಾಡುವ ಮೂಲಕ ಫೋನ್ ಕರೆ ಮಾಡಬಹುದು, ಮಾರ್ಗ ನಿರ್ದೇಶನಗಳನ್ನು ಪಡೆಯಬಹುದು, ಭಾಷೆಗಳನ್ನು ಅನುವಾದಿಸಬಹುದು, ಕರೆನ್ಸಿಗಳನ್ನು ಪರಿವರ್ತಿಸಬಹುದು ಮತ್ತು ಇನ್ನಷ್ಟು ಕ್ರಿಯೆಗಳನ್ನು ಮಾಡಬಹುದು.

  1. ಪಠ್ಯವನ್ನು ಒಳಗೊಂಡಿರುವ ಫೋಟೋವನ್ನು ತೆರೆಯಿರಿ ಅಥವಾ ವೀಡಿಯೊವನ್ನು ವಿರಾಮಗೊಳಿಸಿ.

  2. ಪಠ್ಯವನ್ನು ಗುರುತಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

  3. ಸ್ಕ್ರೀನ್‌ನ ಕೆಳಗಿರುವ ತ್ವರಿತ ಆ್ಯಕ್ಷನ್ ಅನ್ನು ಟ್ಯಾಪ್ ಮಾಡಿ.

  4. ಫೋಟೋ ಅಥವಾ ವೀಡಿಯೊಗೆ ಮರಳಲು ಪಠ್ಯವನ್ನು ಗುರುತಿಸಿ ಬಟನ್ ಅನ್ನು ಟ್ಯಾಪ್ ಮಾಡಿ.

ಲೈವ್ ಪಠ್ಯವು ಎಲ್ಲಾ ಪ್ರದೇಶಗಳು ಅಥವಾ ಭಾಷೆಗಳಲ್ಲಿ ಲಭ್ಯವಿರುವುದಿಲ್ಲ. iOS ಮತ್ತು iPadOS ಫೀಚರ್ ಲಭ್ಯತೆ ಎಂಬುದನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.