ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ ಕುಟುಂಬ ಹಂಚಿಕೆ ಗುಂಪನ್ನು ತೊರೆಯುವುದು ಮತ್ತು ಅದರಿಂದ ಸದಸ್ಯರನ್ನು ತೆಗೆದುಹಾಕುವುದು

ಕುಟುಂಬ ಹಂಚಿಕೆ ಗುಂಪಿನಲ್ಲಿ, ವ್ಯವಸ್ಥಾಪಕರು ಸದಸ್ಯರನ್ನು ತೆಗೆದುಹಾಕಬಹುದು ಅಥವಾ ಗುಂಪನ್ನು ವಿಸರ್ಜಿಸಬಹುದು ಮತ್ತು ಕುಟುಂಬದ ಸದಸ್ಯರು (ಪೋಷಕರು ಹೇರುವ ನಿಯಂತ್ರಣ ಹೊಂದಿರುವ ಹದಿಹರೆಯದವರು ಅಥವಾ ಮಕ್ಕಳನ್ನು ಹೊರತುಪಡಿಸಿ) ತಮ್ಮನ್ನು ತಾವು ತೆಗೆದುಹಾಕಿಕೊಳ್ಳಬಹುದು.

ಕುಟುಂಬ ಹಂಚಿಕೆ ಸದಸ್ಯರ ಪ್ರಕಾರಗಳ ಕುರಿತು ತಿಳಿಯಿರಿ .

ಕುಟುಂಬದ ಗುಂಪಿನಿಂದ ಸದಸ್ಯರನ್ನು ತೆಗೆದುಹಾಕಿ

ಕುಟುಂಬ ಹಂಚಿಕೆ ಗುಂಪಿನ ವ್ಯವಸ್ಥಾಪಕರು ಇತರ ಸದಸ್ಯರನ್ನು ತೆಗೆದುಹಾಕಬಹುದು. ಕುಟುಂಬದ ಸದಸ್ಯರನ್ನು ತೆಗೆದುಹಾಕಿದಾಗ, ಅವರು ಹಂಚಿಕೊಂಡ ಸಬ್‌ಸ್ಕ್ರಿಪ್ಶನ್‌ಳು ಮತ್ತು ಇತರ ಸದಸ್ಯರು ಖರೀದಿಸಿದ ಕಂಟೆಂಟ್‌ಗೆ ತಕ್ಷಣವೇ ಆ್ಯಕ್ಸೆಸ್ ಕಳೆದುಕೊಳ್ಳುತ್ತಾರೆ.

  1. ಸೆಟ್ಟಿಂಗ್ಸ್ > ಕುಟುಂಬ ಎಂಬಲ್ಲಿಗೆ ಹೋಗಿ.

  2. [ಸದಸ್ಯರ ಹೆಸರು] ಅನ್ನು ಟ್ಯಾಪ್ ಮಾಡಿ, ನಂತರ [ಸದಸ್ಯರ ಹೆಸರು] ಅನ್ನು ಕುಟುಂಬದಿಂದ ತೆಗೆದುಹಾಕಿ ಎಂಬುದನ್ನು ಟ್ಯಾಪ್ ಮಾಡಿ.

ನಿಮ್ಮ ಕುಟುಂಬ ಹಂಚಿಕೆ ಗುಂಪಿನಿಂದ ಮಗುವನ್ನು ತೆಗೆದುಹಾಕಲು ನಿಮಗೆ ಸಾಧ್ಯವಾಗುವುದಿಲ್ಲ. ಆದಾಗ್ಯೂ, ನೀವು ಅವರನ್ನು ಮತ್ತೊಂದು ಗುಂಪಿಗೆ ಮೂವ್ ಮಾಡಬಹುದು ಅಥವಾ ಅವರ Apple ಖಾತೆಯನ್ನು ಡಿಲೀಟ್ ಮಾಡಬಹುದು. ಕುಟುಂಬ ಹಂಚಿಕೆಯನ್ನು ಬಳಸಿಕೊಂಡು ಮಗುವನ್ನು ಮತ್ತೊಂದು ಗುಂಪಿಗೆ ಮೂವ್ ಮಾಡಿ ಎಂಬದನ್ನು Apple ಬೆಂಬಲ ಲೇಖನವನ್ನು ಓದಿರಿ.

ನೀವು ಹದಿಹರೆಯದವರಿಗಾಗಿ ಸ್ಕ್ರೀನ್ ಟೈಮ್ ಅನ್ನು ಆನ್ ಮಾಡಿದರೆ, ಅವರನ್ನು ಗುಂಪಿನಿಂದ ತೆಗೆದುಹಾಕುವ ಮೊದಲು ನೀವು ಸ್ಕ್ರೀನ್ ಟೈಮ್ ಸೆಟ್ಟಿಂಗ್ಸ್ ಅನ್ನು ಆಫ್ ಮಾಡಬೇಕಾಗುತ್ತದೆ. ಕುಟುಂಬದ ಸದಸ್ಯರಿಗಾಗಿ ಸ್ಕ್ರೀನ್ ಟೈಮ್ ಅನ್ನು ಸೆಟಪ್ ಮಾಡಿ ಎಂಬುದನ್ನು ನೋಡಿ.

ಕುಟುಂಬ ಹಂಚಿಕೆ ಗುಂಪನ್ನು ತೊರೆಯಿರಿ

ನೀವು ಕುಟುಂಬ ಹಂಚಿಕೆ ಗುಂಪನ್ನು ತೊರೆದಾಗ, ನಿಮ್ಮ ಖರೀದಿಗಳು ಮತ್ತು ಸಬ್‌ಸ್ಕ್ರಿಪ್ಶನ್‌ಗಳನ್ನು ಕುಟುಂಬ ಸದಸ್ಯರೊಂದಿಗೆ ಹಂಚಿಕೊಳ್ಳುವುದನ್ನು ನೀವು ನಿಲ್ಲಿಸುತ್ತೀರಿ ಮತ್ತು ಅವರು ಹಂಚಿಕೊಂಡ ಯಾವುದೇ ಕಂಟೆಂಟ್‌ಗೆ ನೀವು ತಕ್ಷಣವೇ ಆ್ಯಕ್ಸೆಸ್ ಕಳೆದುಕೊಳ್ಳುತ್ತೀರಿ.

ಗಮನಿಸಿ: ಕುಟುಂಬ ಹಂಚಿಕೆ ಗುಂಪನ್ನು ತೊರೆಯಲು ವ್ಯವಸ್ಥಾಪಕರಿಗೆ ಸಾಧ್ಯವಾಗುವುದಿಲ್ಲ. ನೀವು ವ್ಯವಸ್ಥಾಪಕರನ್ನು ಬದಲಾಯಿಸಲು ಬಯಸಿದರೆ, ನೀವು ಗುಂಪನ್ನು ವಿಸರ್ಜಿಸಬೇಕು ಮತ್ತು ಬೇರೊಬ್ಬ ವಯಸ್ಕರೊಬ್ಬರು ಹೊಸ ಗುಂಪನ್ನು ರಚಿಸಬೇಕು.

  1. ಸೆಟ್ಟಿಂಗ್ಸ್ > ಕುಟುಂಬ ಎಂಬಲ್ಲಿಗೆ ಹೋಗಿ.

  2. [ನಿಮ್ಮ ಹೆಸರು ] ಅನ್ನು ಟ್ಯಾಪ್ ಮಾಡಿ, ನಂತರ ಕುಟುಂಬ ಹಂಚಿಕೆ ಬಳಸುವುದನ್ನು ನಿಲ್ಲಿಸಿ ಎಂಬುದನ್ನು ಟ್ಯಾಪ್ ಮಾಡಿ.

ಕುಟುಂಬ ಹಂಚಿಕೆಯನ್ನು ನಿಲ್ಲಿಸುವುದು

ಕುಟುಂಬದ ವ್ಯವಸ್ಥಾಪಕರು ಕುಟುಂಬ ಹಂಚಿಕೆಯನ್ನು ಆಫ್ ಮಾಡಿದಾಗ, ಕುಟುಂಬದ ಎಲ್ಲಾ ಸದಸ್ಯರನ್ನು ಒಂದೇ ಸಮಯದಲ್ಲಿ ಗುಂಪಿನಿಂದ ತೆಗೆದುಹಾಕಲಾಗುತ್ತದೆ. ಕುಟುಂಬ ಹಂಚಿಕೆಯನ್ನು ಆಫ್ ಮಾಡಿದಾಗ, ಹಂಚಿಕೊಂಡ ಕಂಟೆಂಟ್ ಮತ್ತು ಸಬ್‌ಸ್ಕ್ರಿಪ್ಶನ್‌ಗಳಿಗೆ ಎಲ್ಲಾ ಸದಸ್ಯರು ತಕ್ಷಣವೇ ಆ್ಯಕ್ಸೆಸ್ ಅನ್ನು ಕಳೆದುಕೊಳ್ಳುತ್ತಾರೆ.

ಗಮನಿಸಿ: ಮಗುವು ಕುಟುಂಬ ಹಂಚಿಕೆ ಗುಂಪಿನಲ್ಲಿದ್ದರೆ, ಗುಂಪನ್ನು ವಿಸರ್ಜಿಸುವ ಮೊದಲು ಆಯೋಜಕರು ಅವರನ್ನು ಮತ್ತೊಂದು ಗುಂಪಿಗೆ ಮೂವ್ ಮಾಡಬೇಕು ಅಥವಾ ಅವರ Apple ಖಾತೆಯನ್ನು ಡಿಲೀಟ್ ಮಾಡಬೇಕು. ಕುಟುಂಬ ಹಂಚಿಕೆಯನ್ನು ಬಳಸಿಕೊಂಡು ಮಗುವನ್ನು ಮತ್ತೊಂದು ಗುಂಪಿಗೆ ಮೂವ್ ಮಾಡಿ ಎಂಬದನ್ನು Apple ಬೆಂಬಲ ಲೇಖನವನ್ನು ಓದಿರಿ.

  1. ಸೆಟ್ಟಿಂಗ್ಸ್ > ಕುಟುಂಬ ಎಂಬಲ್ಲಿಗೆ ಹೋಗಿ.

  2. [ನಿಮ್ಮ ಹೆಸರು ] ಅನ್ನು ಟ್ಯಾಪ್ ಮಾಡಿ, ನಂತರ ಕುಟುಂಬ ಹಂಚಿಕೆ ಬಳಸುವುದನ್ನು ನಿಲ್ಲಿಸಿ ಎಂಬುದನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.