ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿನ ನಕ್ಷೆ ಆ್ಯಪ್‌ನಲ್ಲಿ ಸ್ಥಳಗಳನ್ನು ಹಂಚಿಕೊಳ್ಳುವುದು

ನೀವು ಇತರರೊಂದಿಗೆ ಸ್ಥಳಗಳನ್ನು ಹಂಚಿಕೊಳ್ಳಬಹುದು. ಉದಾಹರಣೆಗೆ, ನಿಮ್ಮನ್ನು ಎಲ್ಲಿ ಭೇಟಿಯಾಗಬೇಕಬೇಕೆಂದು ಜನರಿಗೆ ತೋರಿಸಲು ನೀವು ಸಂದೇಶ ಅಥವಾ ಈಮೇಲ್ ಕಳುಹಿಸಬಹುದು.

ಸಲಹೆ: ನಕ್ಷೆ ಆ್ಯಪ್ ತೆರೆದಿರದಿದ್ದಾಗ ನಿಮ್ಮ ಪ್ರಸ್ತುತ ಸ್ಥಳವನ್ನು ಹಂಚಿಕೊಳ್ಳಲು, ಹೋಮ್ ಸ್ಕ್ರೀನ್‌ನಲ್ಲಿರುವ ನಕ್ಷೆ ಆ್ಯಪ್ ಅನ್ನು ಒತ್ತಿ ಹಿಡಿದುಕೊಳ್ಳಿ, ನಂತರ ನನ್ನ ಸ್ಥಳವನ್ನು ಕಳುಹಿಸಿ ಎಂಬುದನ್ನು ಟ್ಯಾಪ್ ಮಾಡಿ. ತ್ವರಿತ ಆ್ಯಕ್ಷನ್‌ಗಳನ್ನು ನಿರ್ವಹಿಸಿ ಎಂಬುದನ್ನು ನೋಡಿ.

  1. ನಿಮ್ಮ iPadನಲ್ಲಿ ನಕ್ಷೆ ಆ್ಯಪ್‌ಗೆ ಹೋಗಿ.

  2. ನಕ್ಷೆಯಲ್ಲಿನ ಸ್ಥಳವೊಂದನ್ನು ಟ್ಯಾಪ್ ಮಾಡಿ ಅಥವಾ ಹುಡುಕಾಟದ ಫಲಿತಾಂಶವನ್ನು ಟ್ಯಾಪ್ ಮಾಡಿ.

  3. ಹಂಚಿಕೊಳ್ಳಿ ಬಟನ್ ಅನ್ನು (ಪ್ಲೇಸ್ ಕಾರ್ಡ್‌ನ ಮೇಲ್ಭಾಗದಲ್ಲಿ) ಟ್ಯಾಪ್ ಮಾಡಿ, ನಂತರ ಒಂದು ಆಯ್ಕೆಯನ್ನು ಆರಿಸಿ.

ನೀವು ಸ್ಥಳವನ್ನು ಸ್ಪರ್ಶಿಸಿ ಹಿಡಿದುಕೊಳ್ಳಬಹುದು, ನಂತರ ಸ್ಥಳವನ್ನು ಹಂಚಿಕೊಳ್ಳಿ ಎಂಬುದನ್ನು ಟ್ಯಾಪ್ ಮಾಡಬಹುದು.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.