ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿನ ನಿಮ್ಮ Mail ಆ್ಯಪ್‌ನ ಸೆಟ್ಟಿಂಗ್ಸ್ ಅನ್ನು ಬದಲಾಯಿಸುವುದು

ನೀವು ಸೆಟ್ಟಿಂಗ್ಸ್ ಆ್ಯಪ್‌ನಲ್ಲಿ Mail ಆ್ಯಪ್‌ಗಾಗಿ ನಿಮ್ಮ ಆದ್ಯತೆಗಳನ್ನು ಸರಿಹೊಂದಿಸಬಹುದು. ನಿಮ್ಮ ಈಮೇಲ್‌ ಸಹಿಯನ್ನು ಕಸ್ಟಮೈಸ್ ಮಾಡಿ, ನಿರ್ದಿಷ್ಟ ಡೊಮೇನ್‌ಗಳ ಹೊರಗಿನ ವಿಳಾಸಗಳನ್ನು ಗುರುತು ಮಾಡಿ ಮತ್ತು ಇನ್ನಷ್ಟು.

iCloud, Microsoft Exchange, Google, Yahoo, AOL ಮತ್ತು ಇತರ Mail ಖಾತೆಗಳನ್ನು ತೋರಿಸುತ್ತಿರುವ ಈಮೇಲ್ ಖಾತೆಯ ಪ್ರಕಾರವನ್ನು ಆರಿಸುವ ಆಯ್ಕೆಗಳನ್ನು ಹೊಂದಿರುವ “ಖಾತೆಯನ್ನು ಸೇರಿಸಿ” ಸ್ಕ್ರೀನ್.

ನಿಮ್ಮ Mail ಆ್ಯಪ್‌ನ ಸೆಟ್ಟಿಂಗ್ಸ್ ಕಸ್ಟಮೈಸ್ ಮಾಡುವುದು

  1. ಸೆಟ್ಟಿಂಗ್ಸ್ ಆ್ಯಪ್‌  > ಆ್ಯಪ್‌ಗಳು > Mail ಆ್ಯಪ್ ಎಂಬಲ್ಲಿಗೆ ಹೋಗಿ.

  2. ಈ ಕೆಳಗಿನ ಯಾವುದೇ ಸೆಟ್ಟಿಂಗ್ಸ್ ಸರಿಹೊಂದಿಸಿ:

    • Mail ಖಾತೆಗಳು: ಈಮೇಲ್ ಖಾತೆಗಳನ್ನು ಸೇರಿಸಿ ಮತ್ತು ತೆಗೆದುಹಾಕಿ.

    • Siri: ನೀವು Mail ಬಳಸುವ ವಿಧಾನವನ್ನು ಆಧರಿಸಿ ಆ್ಯಪ್‌ಗಳಾದ್ಯಂತ ಸಲಹೆಗಳನ್ನು ನೀಡಲು Siriಗೆ ಅನುಮತಿಸಿ.

    • ಹುಡುಕಿ: Mail ಆ್ಯಪ್‌ನ ಕಂಟೆಂಟ್‌ಗೆ ಹುಡುಕಾಟದಲ್ಲಿ ಕಾಣಿಸಿಕೊಳ್ಳಲು ಅನುಮತಿಸಿ.

    • ಡಿಫಾಲ್ಟ್ Mail ಆ್ಯಪ್: ನೀವು Siriಯನ್ನು ಬಳಸಿ ರಚಿಸುವ ಈಮೇಲ್‌ಗಳಂತಹ, ನಿರ್ದಿಷ್ಟ ಆ್ಯಪ್ ಒಂದರ ಹೊರಗೆ ನೀವು ಡ್ರಾಫ್ಟ್ ಮಾಡುವ ಹೊಸ ಈಮೇಲ್‌ಗಳಿ‌ಗಾಗಿ ಈಮೇಲ್‌ ಆ್ಯಪ್ ಅನ್ನು ಆರಿಸಿ.

    • ಸಂದೇಶ ಪಟ್ಟಿ: ನಿಮ್ಮ ಸಂದೇಶ ಪಟ್ಟಿಯ ಸೆಟ್ಟಿಂಗ್ಸ್ ಬದಲಾಯಿಸಿ, ಉದಾಹರಣೆಗೆ, “ಇವರಿಗೆ/Cc ಲೇಬಲ್‌ಗಳನ್ನು ತೋರಿಸುತ್ತಿರುವುದು, ಈಮೇಲ್‌ ಪ್ರಿವ್ಯೂಗಳ ಉದ್ದವನ್ನು ಆಯ್ಕೆ ಮಾಡುವುದು ಮತ್ತು ಸ್ವೈಪ್ ಆಯ್ಕೆಗಳನ್ನು ಕಸ್ಟಮೈಸ್ ಮಾಡುವುದು.

    • ಸಂದೇಶ ಆ್ಯಪ್: ಗೌಪ್ಯತೆ ರಕ್ಷಣೆಯನ್ನು ಆನ್ ಮಾಡಿ, ಡಿಲೀಟ್ ಮಾಡುವ ಮೊದಲು ಕೇಳಿ ಮತ್ತು ಸಲಹೆಗಳನ್ನು ಫಾಲೋ ಅಪ್ ಮಾಡಿ ಎಂಬುದನ್ನು ಆನ್ ಮಾಡಿ.

    • ಥ್ರೆಡಿಂಗ್: ಸಂಭಾಷಣೆಯಲ್ಲಿರುವ ಈಮೇಲ್‌ಗಳನ್ನು ನಿಮ್ಮ ಸಂದೇಶ ಪಟ್ಟಿಯಲ್ಲಿ ಒಟ್ಟಿಗೆ ಗುಂಪು ಮಾಡಲು ಥ್ರೆಡ್ ಮೂಲಕ ವ್ಯವಸ್ಥಿತಗೊಳಿಸಿ ಎಂಬುದನ್ನು ಆನ್ ಮಾಡಿ. ಥ್ರೆಡ್‌ಗಳು ಹೇಗೆ ಕಾಣಿಸಿಕೊಳ್ಳುತ್ತವೆ ಎಂಬುದಕ್ಕೆ ಮತ್ತು ಥ್ರೆಡ್‌ಗಳನ್ನು ಮ್ಯೂಟ್ ಮಾಡುವುದಕ್ಕೆ ಸಂಬಂಧಿಸಿದ ಇತರ ಸೆಟ್ಟಿಂಗ್ಸ್ ಸರಿಹೊಂದಿಸಿ.

    • ಕಂಪೋಸ್ ಮಾಡುವುದು: ಈಮೇಲ್‌ಗಳನ್ನು ಬರೆಯುವುದಕ್ಕೆ ಸಂಬಂಧಿಸಿದ ಸೆಟ್ಟಿಂಗ್ಸ್ ಕಸ್ಟಮೈಸ್ ಮಾಡಿ, ಉದಾಹರಣೆಗೆ ಪ್ರತಿಕ್ರಿಯೆಗಳೊಂದಿಗೆ ಅಟ್ಯಾಚ್‌ಮೆಂಟ್‌ಗಳನ್ನು ಸೇರಿಸುವುದು, ಲಿಂಕ್ ಪ್ರಿವ್ಯೂಗಳನ್ನು ತೋರಿಸುವುದು ಮತ್ತು ಇತ್ಯಾದಿ.

    • ಕಳುಹಿಸುವಿಕೆಯ ವಿಳಂಬವನ್ನು ಅನ್‌ಡು ಮಾಡಿ: ಕಳುಹಿಸಿರುವ ಸಂದೇಶವನ್ನು ರದ್ದುಮಾಡಲು ನಿಮಗೆ ಅವಕಾಶ ದೊರೆಯುವಂತೆ 30 ಸೆಕೆಂಡ್‌ಗಳವರೆಗಿನ ಅವಧಿಯನ್ನು ಸೆಟ್ ಮಾಡಿ.

ನಿಮ್ಮ ಈಮೇಲ್‌ ಸಹಿಯನ್ನು ಕಸ್ಟಮೈಸ್ ಮಾಡುವುದು

ನೀವು ಕಳುಹಿಸುವ ಪ್ರತಿ ಸಂದೇಶದ ಕೆಳಭಾಗದಲ್ಲಿ ಸ್ವಯಂಚಾಲಿತವಾಗಿ ಗೋಚರಿಸುವ ಈಮೇಲ್ ಸಹಿಯನ್ನು ನೀವು ಕಸ್ಟಮೈಸ್ ಮಾಡಬಹುದು.

  1. ಸೆಟ್ಟಿಂಗ್ಸ್ ಆ್ಯಪ್‌  > ಆ್ಯಪ್‌ಗಳು > Mail ಆ್ಯಪ್ ಎಂಬಲ್ಲಿಗೆ ಹೋಗಿ.

  2. ಸಹಿಯನ್ನು ಟ್ಯಾಪ್ ಮಾಡಿ (ರಚಿಸುವುದು ಎಂಬುದರ ಕೆಳಗೆ)

  3. ಪಠ್ಯ ಫೀಲ್ಡ್ ಅನ್ನು ಟ್ಯಾಪ್ ಮಾಡಿ, ನಂತರ ನಿಮ್ಮ ಸಹಿಯನ್ನು ಎಡಿಟ್ ಮಾಡಿ.

    ನಿಮ್ಮ Mail ಆ್ಯಪ್‌ನ ಸಹಿಗಳಲ್ಲಿ ನೀವು ಪಠ್ಯವನ್ನು ಮಾತ್ರ ಬಳಸಬಹುದು.

ಸಲಹೆ: ನೀವು ಒಂದಕ್ಕಿಂತ ಹೆಚ್ಚಿನ ಈಮೇಲ್‌ ಖಾತೆಗಳನ್ನು ಹೊಂದಿದ್ದರೆ, ಪ್ರತಿಯೊಂದು ಖಾತೆಗಾಗಿ ವಿಭಿನ್ನ ಸಹಿಯನ್ನು ಸೆಟ್ ಮಾಡಲು ಪ್ರತಿಯೊಂದು ಖಾತೆಗೆ ಎಂಬುದನ್ನು ಟ್ಯಾಪ್ ಮಾಡಿ.

ನಿರ್ದಿಷ್ಟ ಡೊಮೇನ್‌ಗಳಿಗೆ ಸೇರದ ವಿಳಾಸಗಳನ್ನು ಗುರುತು ಮಾಡಿ

ನಿಮ್ಮ ಸಂಸ್ಥೆಯ ಡೊಮೇನ್‌ನಲ್ಲಿ ಇಲ್ಲದಿರುವ ಸ್ವೀಕೃತದಾರರಿಗೆ ನೀವು ಈಮೇಲ್‌ ಸಂದೇಶ ಕಳುಹಿಸುವಾಗ, ನಿಮ್ಮನ್ನು ಅಲರ್ಟ್ ಮಾಡುವುದಕ್ಕಾಗಿ ಸ್ವೀಕೃತದಾರರ ಹೆಸರು ಕೆಂಪು ಬಣ್ಣದಲ್ಲಿ ಕಾಣಿಸುವಂತೆ ನೀವು ಮಾಡಬಹುದು.

  1. ಸೆಟ್ಟಿಂಗ್ಸ್ ಆ್ಯಪ್‌  > ಆ್ಯಪ್‌ಗಳು > Mail ಆ್ಯಪ್ ಎಂಬಲ್ಲಿಗೆ ಹೋಗಿ.

  2. ವಿಳಾಸಗಳನ್ನು ಗುರುತು ಮಾಡಿ ಎಂಬುದನ್ನು ಟ್ಯಾಪ್ ಮಾಡಿ (ರಚಿಸುವುದು ಎಂಬುದರ ಕೆಳಗೆ).

  3. ನಿಮ್ಮ ಸಂಸ್ಥೆಯಲ್ಲಿರುವ ಡೊಮೇನ್‌ಗಳನ್ನು ನಮೂದಿಸಿ—ನೀವು ಕೆಂಪು ಬಣ್ಣದಲ್ಲಿ ಗುರುತಿಸಲು ಬಯಸದಿರುವುದನ್ನು ನಮೂದಿಸಿ.

    ನೀವು ಅಲ್ಪವಿರಾಮದಿಂದ ಬೇರ್ಪಡಿಸಲಾದ ಹಲವಾರು ಡೊಮೇನ್‌ಗಳನ್ನು ನಮೂದಿಸಬಹುದು (ಉದಾಹರಣೆಗೆ, “apple.com, example.org”).

    ನಿಮ್ಮ ಸಂಸ್ಥೆಯ ಹೊರಗಿನ ಡೊಮೇನ್‌ಗಳಲ್ಲಿರುವ ಸ್ವೀಕೃತದಾರರಿಗೆ ನೀವು ಈಮೇಲ್ ಕಳುಹಿಸುತ್ತಿದ್ದರೂ ಅಥವಾ ಅವರಿಂದ ಈಮೇಲ್ ಸ್ವೀಕರಿಸುತ್ತಿದ್ದರೂ, ಅವರ ಹೆಸರುಗಳು ಕೆಂಪು ಬಣ್ಣದಲ್ಲಿ ಗೋಚರಿಸುತ್ತವೆ.

Mail ಆ್ಯಪ್‌ನ ಟೂಲ್‌ಬಾರ್ ಅನ್ನು ಕಸ್ಟಮೈಸ್ ಮಾಡುವುದು

ಆ್ಯಕ್ಷನ್‌ಗಳನ್ನು ಮುಂಭಾಗ ಮತ್ತು ಮಧ್ಯಭಾಗದಲ್ಲಿ ಹೆಚ್ಚು ಉಪಯುಕ್ತವಾಗಿಸಲು, Mail ಆ್ಯಪ್‌ನ ಮೇಲ್ಭಾಗದಲ್ಲಿ ಯಾವ ಬಟನ್‌ಗಳು ಗೋಚರಿಸುತ್ತವೆ ಎಂಬುದನ್ನು ನೀವು ಆಯ್ಕೆಮಾಡಬಹುದು.

  1. ನಿಮ್ಮ iPadನಲ್ಲಿ Mail ಆ್ಯಪ್‌ಗೆ ಹೋಗಿ.

  2. ಇನ್ನಷ್ಟು ಮೆನು ಅನ್ನು ಟ್ಯಾಪ್ ಮಾಡಿ, ನಂತರ ಟೂಲ್‌ಬಾರ್ ಅನ್ನು ಕಸ್ಟಮೈಸ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

  3. ಬಟನ್‌ಗಳನ್ನು ಟೂಲ್‌ಬಾರ್‌ಗೆ ಸೇರಿಸಲು ಅಥವಾ ಅಲ್ಲಿಂದ ತೆಗೆದುಹಾಕಲು ಅವುಗಳನ್ನು ಡ್ರ್ಯಾಗ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.