ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿ ಆ್ಯಪ್ ಕ್ಲಿಪ್‌ಗಳನ್ನು ಬಳಸುವುದು

ಆ್ಯಪ್ ಕ್ಲಿಪ್ ಎಂಬುದು ಆ್ಯಪ್‌ನ ಒಂದು ಸಣ್ಣ ಭಾಗವಾಗಿದ್ದು, ಇದು ಬೈಕ್ ಅನ್ನು ಬಾಡಿಗೆಗೆ ಪಡೆಯುವುದು, ಪಾರ್ಕಿಂಗ್‌ಗೆ ಪಾವತಿಸುವುದು ಅಥವಾ ಆಹಾರವನ್ನು ಆರ್ಡರ್ ಮಾಡುವುದು ಸೇರಿದಂತೆ ಹಲವು ಕಾರ್ಯವನ್ನು ತ್ವರಿತವಾಗಿ ನಿರ್ವಹಿಸಲು ನಿಮಗೆ ಅನುವು ಮಾಡಿಕೊಡುತ್ತದೆ. ನೀವು Safari, ನಕ್ಷೆ, ಸಂದೇಶ ಆ್ಯಪ್‌ಗಳಲ್ಲಿ ಅಥವಾ ವಾಸ್ತವಿಕ ಪ್ರಪಂಚದಲ್ಲಿ QR ಕೋಡ್‌ಗಳು ಮತ್ತು ಆ್ಯಪ್ ಕ್ಲಿಪ್ ಕೋಡ್‌ಗಳು—ನಿರ್ದಿಷ್ಟ ಆ್ಯಪ್ ಕ್ಲಿಪ್‌ಗಳಿಗೆ ನಿಮ್ಮನ್ನು ಕರೆದೊಯ್ಯುವ ಅನನ್ಯ ಮಾರ್ಕರ್‌ಗಳು, ಇವುಗಳ ಮೂಲಕ ಆ್ಯಪ್ ಕ್ಲಿಪ್‌ಗಳನ್ನು ಅನ್ವೇಷಿಸಬಹುದು.

ಎಡಭಾಗದಲ್ಲಿ, ಮಧ್ಯದಲ್ಲಿ iPhone ಐಕಾನ್ ಹೊಂದಿರುವ NFC-ಇಂಟಿಗ್ರೇಟೆಡ್ ಆ್ಯಪ್ ಕ್ಲಿಪ್ ಕೋಡ್ ಇದೆ. ಬಲಭಾಗದಲ್ಲಿ, ಮಧ್ಯದಲ್ಲಿ ಕ್ಯಾಮರಾ ಐಕಾನ್ ಹೊಂದಿರುವ ಸ್ಕ್ಯಾನ್-ಮಾತ್ರ ಆ್ಯಪ್ ಕ್ಲಿಪ್ ಕೋಡ್ ಇದೆ.

ಆ್ಯಪ್ ಕ್ಲಿಪ್‌ಗಳನ್ನು ಪಡೆಯುವುದು ಮತ್ತು ಬಳಸುವುದು

  1. ಕೆಳಗಿನವುಗಳಲ್ಲಿ ಯಾವುದಾದರೂ ಒಂದರಿಂದ ಆ್ಯಪ್ ಕ್ಲಿಪ್‌ಗಳನ್ನು ಪಡೆಯಿರಿ:

    • ಆ್ಯಪ್ ಕ್ಲಿಪ್ ಕೋಡ್ ಅಥವಾ QR ಕೋಡ್: ಕಂಟ್ರೋಲ್ ಸೆಂಟರ್‌ನಲ್ಲಿರುವ iPad ಕ್ಯಾಮರಾ ಅಥವಾ ಕೋಡ್ ಸ್ಕ್ಯಾನರ್ ಬಳಸಿ ಕೋಡ್ ಅನ್ನು ಸ್ಕ್ಯಾನ್ ಮಾಡಿ.

    • ನಕ್ಷೆ: ಮಾಹಿತಿ ಕಾರ್ಡ್‌ನಲ್ಲಿರುವ ಆ್ಯಪ್ ಕ್ಲಿಪ್ ಲಿಂಕ್ ಅನ್ನು ಟ್ಯಾಪ್ ಮಾಡಿ (ಬೆಂಬಲಿತ ಸ್ಥಳಗಳಿಗಾಗಿ).

    • Safari ಅಥವಾ ಸಂದೇಶ ಆ್ಯಪ್: ಆ್ಯಪ್ ಕ್ಲಿಪ್ ಲಿಂಕ್ ಅನ್ನು ಟ್ಯಾಪ್ ಮಾಡಿ.

  2. ಆ್ಯಪ್ ಕ್ಲಿಪ್ ಸ್ಕ್ರೀನ್ ಮೇಲೆ ಕಾಣಿಸಿಕೊಂಡಾಗ, ತೆರೆಯಿರಿ ಅಥವಾ ಪ್ಲೇ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

ಬೆಂಬಲಿತ ಆ್ಯಪ್ ಕ್ಲಿಪ್‌ಗಳಲ್ಲಿ, ನೀವು Appleನೊಂದಿಗೆ ಸೈನ್ ಇನ್ ಮಾಡಿ ಎಂಬುದನ್ನು ಬಳಸಬಹುದು, ನಂತರ Apple Payಯನ್ನು ಬಳಸಿಕೊಂಡು ಪಾವತಿ ಮಾಡಬಹುದು.

ಕೆಲವು ಆ್ಯಪ್ ಕ್ಲಿಪ್‌ಗಳೊಂದಿಗೆ, ಸಂಪೂರ್ಣ ಆ್ಯಪ್ ಅನ್ನು ನೋಡಲು ನೀವು ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ಬ್ಯಾನರ್ ಅನ್ನು ಟ್ಯಾಪ್ ಮಾಡಬಹುದು.

iPadನಲ್ಲಿ ನೀವು ಬಳಸಿದ ಆ್ಯಪ್ ಕ್ಲಿಪ್‌ಗಳನ್ನು ಹುಡುಕುವುದು

ಆ್ಯಪ್ ಲೈಬ್ರರಿಗೆ ಹೋಗಿ, ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ಹುಡುಕಾಟದ ಫೀಲ್ಡ್ ಅನ್ನು ಟ್ಯಾಪ್ ಮಾಡಿ, ನಂತರ ವರ್ಣಮಾಲೆಯ ಪಟ್ಟಿಯ ಕೊನೆಯವರೆಗೆ ಸ್ಕ್ರೋಲ್ ಮಾಡಿ.

ಆ್ಯಪ್ ಕ್ಲಿಪ್‌ಗಳನ್ನು ತೆಗೆದುಹಾಕುವುದು

  1. ಆ್ಯಪ್ ಲೈಬ್ರರಿಗೆ ಹೋಗಿ, ನಂತರ ಸ್ಕ್ರೀನ್‌ನ ಮೇಲ್ಭಾಗದಲ್ಲಿರುವ ಹುಡುಕಾಟದ ಫೀಲ್ಡ್ ಅನ್ನು ಟ್ಯಾಪ್ ಮಾಡಿ.

  2. ಆ್ಯಪ್ ಕ್ಲಿಪ್ ಹೆಸರನ್ನು ನಮೂದಿಸಿ ಅಥವಾ ಕೆಳಭಾಗದಲ್ಲಿರುವ ಆ್ಯಪ್‌ ಕ್ಲಿಪ್‌ಗಳಿಗೆ ಸ್ಕ್ರೋಲ್ ಮಾಡಿ.

  3. ನೀವು ಡಿಲೀಟ್ ಮಾಡಲು ಬಯಸುವ ಆ್ಯಪ್ ಕ್ಲಿಪ್ ಅನ್ನು ಒತ್ತಿ ಹಿಡಿಯಿರಿ, ನಂತರ ಆ್ಯಪ್ ಕ್ಲಿಪ್ ಅನ್ನು ತೆಗೆದುಹಾಕಿ ಎಂಬುದನ್ನು ಟ್ಯಾಪ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.