ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

ಸಮೀಪದ Apple ಸಾಧನಗಳಿಗೆ ಐಟಮ್‌ಗಳನ್ನು ಕಳುಹಿಸಲು iPadನಲ್ಲಿ AirDrop ಅನ್ನು ಬಳಸುವುದು

AirDrop ಮೂಲಕ, ಸಮೀಪದ iPhone, iPad ಅಥವಾ Macಗೆ ನೀವು ವೈರ್‌ಲೆಸ್ ಆಗಿ ಫೋಟೊಗಳು, ವೀಡಿಯೊಗಳು, ಡಾಕ್ಯುಮಂಟ್‌ಗಳು ಮತ್ತು ಇತ್ಯಾದಿಯನ್ನು ಕಳುಹಿಸಬಹುದು. ನಿಮ್ಮದೇ ಆದ ಸಾಧನಗಳಿಗೆ ಫೈಲ್‌ಗಳನ್ನು ಕಳುಹಿಸಲು ಅಥವಾ ಇತರರೊಂದಿಗೆ ಫೈಲ್‌ಗಳನ್ನು ಹಂಚಿಕೊಳ್ಳಲು ನೀವು AirDrop ಅನ್ನು ಬಳಸಬಹುದು.

ನೀವು iPhone, iPad ಮತ್ತು Macನೊಂದಿಗೆ AirDrop ಅನ್ನು ಬಳಸಬಹುದು.

ವರ್ಗಾವಣೆಗಳನ್ನು ಭದ್ರತೆಗಾಗಿ ಎನ್‌ಕ್ರಿಪ್ಟ್ ಮಾಡಲಾಗಿರುತ್ತದೆ ಮತ್ತು ಸ್ವೀಕೃತದಾರರು ಪ್ರತಿ ವರ್ಗಾವಣೆ ಬಂದಾಗ ಅದನ್ನು ಸ್ವೀಕರಿಸಬಹುದು ಅಥವಾ ನಿರಾಕರಿಸಬಹುದು.

ಗಮನಿಸಿ: AirDrop ವರ್ಗಾವಣೆಯನ್ನು ಪ್ರಾರಂಭಿಸಿದ ನಂತರ ನೀವು Bluetooth ಅಥವಾ Wi-Fi ವ್ಯಾಪ್ತಿಯನ್ನು ತೊರೆದರೆ, ಇಂಟರ್ನೆಟ್ ಮೂಲಕ ವರ್ಗಾವಣೆಯು ಮುಂದುವರಿಯುತ್ತದೆ.

ನೀವು ಪ್ರಾರಂಭಿಸುವ ಮೊದಲು

ಈ ಕೆಳಗಿನವುಗಳನ್ನು ಖಚಿತಪಡಿಸಿಕೊಳ್ಳಿ:

  • ಎರಡೂ ಸಾಧನಗಳಲ್ಲಿ Wi-Fi ಮತ್ತು Bluetooth® ಅನ್ನು ಆನ್ ಮಾಡಲಾಗಿದೆ.

  • ಸಾಧನಗಳು ಪರಸ್ಪರ 30 ಅಡಿ (10 ಮೀಟರ್) ಅಂತರದ ಒಳಗಿವೆ.

ನೀವು VPN ಅನ್ನು ಬಳಸುತ್ತಿದ್ದರೆ, ಅದರ ಕಾನ್ಫಿಗರೇಶನ್ ಸ್ಥಳೀಯ ನೆಟ್‌ವರ್ಕಿಂಗ್ ಅನ್ನು ತಡೆಯುವುದಿಲ್ಲ ಎಂಬುದನ್ನು ಖಚಿತಪಡಿಸಿಕೊಳ್ಳಿ, ಏಕೆಂದರೆ ಇದು ಕೆಲವು ಕಂಟಿನ್ಯುಯಿಟಿ ಫೀಚರ್‌ಗಳಿಗೆ ಅಡ್ಡಿಯಾಗಬಹುದು.

ನಿಮ್ಮ Apple ಸಾಧನಗಳ ನಡುವೆ ಐಟಮ್‌ಗಳನ್ನು ಕಳುಹಿಸುವುದಕ್ಕಾಗಿ ನೀವು AirDrop ಅನ್ನು ಬಳಸಲು ಬಯಸಿದರೆ, ಐಟಮ್‌ಗಳನ್ನು ಸ್ವಯಂಚಾಲಿತವಾಗಿ ಸ್ವೀಕರಿಸಲು ಮತ್ತು ಸೇವ್ ಮಾಡಲು ಒಂದೇ Apple ಖಾತೆಗೆ ಸೈನ್ ಇನ್ ಮಾಡಿ.

AirDrop ಅನ್ನು ಆನ್ ಮಾಡಿ

  • iPhone ಅಥವಾ iPadನಲ್ಲಿ: ಕಂಟ್ರೋಲ್ ಸೆಂಟರ್ ಅನ್ನು ತೆರೆಯಿರಿ, ಮೇಲಿನ-ಎಡಭಾಗದ ಕಂಟ್ರೋಲ್‌ಗಳ ಗುಂಪನ್ನು ಒತ್ತಿ ಹಿಡಿದುಕೊಳ್ಳಿ, ನಂತರ AirDrop ಐಕಾನ್ ಅನ್ನು ಟ್ಯಾಪ್ ಮಾಡಿ. ನೀವು ಯಾರಿಂದ ಐಟಂಗಳನ್ನು ಸ್ವೀಕರಿಸಲು ಬಯಸುತ್ತೀರಿ ಎಂಬುದನ್ನು ಆಯ್ಕೆ ಮಾಡಲು ಸಂಪರ್ಕಗಳು ಮಾತ್ರ ಅಥವಾ ’10 ನಿಮಿಷಗಳ ಕಾಲ ಪ್ರತಿಯೊಬ್ಬರೂ’ ಎಂಬುದನ್ನು ಟ್ಯಾಪ್ ಮಾಡಿ.

    ಗಮನಿಸಿ: ‘ಸಂಪರ್ಕಗಳು ಮಾತ್ರ’ ಮತ್ತು ’10 ನಿಮಿಷಗಳ ಕಾಲ ಪ್ರತಿಯೊಬ್ಬರೂ’ ಎಂಬ ಆಯ್ಕೆಗಳು ಕನಿಷ್ಠ ಸಿಸ್ಟಂ ಅವಶ್ಯಕತೆಗಳನ್ನು ಹೊಂದಿರುವ ಸಾಧನಗಳಲ್ಲಿ ಮಾತ್ರ ಲಭ್ಯವಿರುತ್ತವೆ.

  • Macನಲ್ಲಿ: ಮೆನು ಬಾರ್‌ನಲ್ಲಿ ಕಂಟ್ರೋಲ್ ಸೆಂಟರ್ ಸ್ಟೇಟಸ್ ಮೆನು ಅನ್ನು ಕ್ಲಿಕ್ ಮಾಡಿ, ನಂತರ AirDrop ಐಕಾನ್ ಅನ್ನು ಕ್ಲಿಕ್ ಮಾಡಿ. ಅದು ನೀಲಿ ಬಣ್ಣದಲ್ಲಿದ್ದರೆ, ಅದು ಆನ್ ಆಗಿರುತ್ತದೆ.

    ನಿಮಗೆ ಐಟಮ್‌ಗಳನ್ನು ಯಾರು ಕಳುಹಿಸಬಹುದು ಎಂಬುದನ್ನು ಆಯ್ಕೆ ಮಾಡಲು, AirDrop ಪಕ್ಕದಲ್ಲಿರುವ ರೈಟ್ ಆ್ಯರೋವನ್ನು ಕ್ಲಿಕ್ ಮಾಡಿ, ನಂತರ ‘ಸಂಪರ್ಕಗಳು ಮಾತ್ರ’ ಅಥವಾ ‘ಪ್ರತಿಯೊಬ್ಬರೂ’ ಎಂಬುದನ್ನು ಕ್ಲಿಕ್ ಮಾಡಿ.

AirDrop ಬಳಸಿಕೊಂಡು ಐಟಮ್ ಅನ್ನು ಕಳುಹಿಸಿ

AirDrop ಮೂಲಕ ಯಾರಿಗಾದರೂ ಒಂದು ಐಟಮ್ ಅನ್ನು ಕಳುಹಿಸಲು, ನೀವು ಮತ್ತು ನಿಮ್ಮ ಸ್ವೀಕೃತದಾರರಿಬ್ಬರೂ AirDrop ಅನ್ನು ಆನ್ ಮಾಡಿರಬೇಕು ಹಾಗೂ ‘ಸಂಪರ್ಕಗಳು’ ಅಥವಾ ‘ಪ್ರತಿಯೊಬ್ಬರೂ’ ಎಂಬುದರಲ್ಲಿ ಯಾವುದಾದರೂ ಒಂದರಿಂದ ಐಟಮ್‌ಗಳನ್ನು ಸ್ವೀಕರಿಸುವುದನ್ನು ಆಯ್ಕೆಮಾಡಿರಬೇಕು. ಒಬ್ಬ ಸ್ವೀಕೃತದಾರರು ಸಂಪರ್ಕದಿಂದ ಮಾತ್ರ ಐಟಂಗಳನ್ನು ಸ್ವೀಕರಿಸುವುದನ್ನು ಆಯ್ಕೆಮಾಡಿದರೆ, ನೀವು ಅವರ ಸಂಪರ್ಕಗಳ ಪಟ್ಟಿಯಲ್ಲಿರಬೇಕು ಮತ್ತು ನಿಮ್ಮ ಸಂಪರ್ಕ ಕಾರ್ಡ್‌ನಲ್ಲಿರುವ ನಿಮ್ಮ Apple ಖಾತೆಯ ಈಮೇಲ್ ವಿಳಾಸ ಅಥವಾ ಫೋನ್ ಸಂಖ್ಯೆಯನ್ನು ಅವರು ಹೊಂದಿರಬೇಕು.

ನಂತರ ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

  • iPhone ಅಥವಾ iPadನಲ್ಲಿ: ಐಟಮ್ ಅನ್ನು ತೆರೆಯಿರಿ, ನಂತರ ಹಂಚಿಕೊಳ್ಳಿ ಎಂಬ ಐಕಾನ್, ಹಂಚಿಕೊಳ್ಳಿ, AirDrop ಐಕಾನ್, ಇನ್ನಷ್ಟು ಎಲಿಪ್ಸಿಸ್ ಬಟನ್ ಅಥವಾ ಬೇರೊಂದು ಬಟನ್ (ಆ್ಯಪ್ ಅನ್ನು ಅವಲಂಬಿಸಿ) ಅನ್ನು ಟ್ಯಾಪ್ ಮಾಡಿ. AirDrop ಐಕಾನ್ ಅನ್ನು ಟ್ಯಾಪ್ ಮಾಡಿ, ನಂತರ ನೀವು ಯಾರೊಂದಿಗೆ ಹಂಚಿಕೊಳ್ಳಲು ಬಯಸುತ್ತಿರೋ ಆ ಸ್ವೀಕೃತದಾರರನ್ನು ಟ್ಯಾಪ್ ಮಾಡಿ. ನಿಮಗೆ ಕಾಣುವ ಸ್ವೀಕೃತದಾರರು ಹತ್ತಿರದಲ್ಲಿ ಇರುವವರಾಗಿರುತ್ತಾರೆ, Wi-Fi ಮತ್ತು Bluetooth ಅನ್ನು ಆನ್ ಮಾಡಿರುವವರಾಗಿರುತ್ತಾರೆ ಮತ್ತು ನಿಮ್ಮ ಸಾಧನದಿಂದ ಫೈಲ್‌ಗಳನ್ನು ಸ್ವೀಕರಿಸಲು ಅವರಿಗೆ ಸಮರ್ಥರಾದವರಾಗಿರುತ್ತಾರೆ.

  • Macನಲ್ಲಿ: Macನಲ್ಲಿ ಐಟಮ್ ಅನ್ನು ತೆರೆಯಿರಿ, ಟೂಲ್‌ಬಾರ್‌ನಲ್ಲಿನ ಹಂಚಿಕೊಳ್ಳಿ ಎಂಬ ಐಕಾನ್ ಅನ್ನು ಕ್ಲಿಕ್ ಮಾಡಿ, ನಂತರ AirDrop ಅನ್ನು ಕ್ಲಿಕ್ ಮಾಡಿ. ನೀವು ಯಾರೊಂದಿಗೆ ಹಂಚಿಕೊಳ್ಳಲು ಬಯಸುತ್ತೀರೋ ಆ ಸ್ವೀಕೃತದಾರರನ್ನು ಆಯ್ಕೆಮಾಡಿ. ನಿಮಗೆ ಕಾಣುವ ಸ್ವೀಕೃತದಾರರು ಹತ್ತಿರದಲ್ಲಿ ಇರುವವರಾಗಿರುತ್ತಾರೆ, Wi-Fi ಮತ್ತು Bluetooth ಅನ್ನು ಆನ್ ಮಾಡಿರುವವರಾಗಿರುತ್ತಾರೆ ಮತ್ತು ನಿಮ್ಮ ಸಾಧನದಿಂದ ಫೈಲ್‌ಗಳನ್ನು ಸ್ವೀಕರಿಸಲು ಅವರಿಗೆ ಸಮರ್ಥರಾದವರಾಗಿರುತ್ತಾರೆ.

    ಸಲಹೆ: ನೀವು AirDrop ಮೂಲಕ Finderನಲ್ಲಿ ಐಟಂಗಳನ್ನು ಹಂಚಿಕೊಳ್ಳಬಹುದು. Finderಗೆ ಹೋಗಿ, ಸೈಡ್‌ಬಾರ್‌ನಲ್ಲಿರುವ AirDrop ಅನ್ನು ಕ್ಲಿಕ್ ಮಾಡಿ, ನೀವು ಹಂಚಿಕೊಳ್ಳಲು ಬಯಸುವ ಐಟಮ್ ಅನ್ನು ಯಾವ ಸ್ವೀಕೃತದಾರರಿಗೆ ಕಳುಹಿಸಲು ಬಯಸುತ್ತೀರೋ ಅವರಿಗೆ ಡ್ರ್ಯಾಗ್ ಮಾಡಿ.

iPhone, iPad ಅಥವಾ Mac ಅನ್ನು ಬಳಸುತ್ತಿರುವ ಯಾವುದೇ ವ್ಯಕ್ತಿಯೊಂದಿಗೆ ಆ್ಯಪ್ ಮತ್ತು ವೆಬ್‌ಸೈಟ್ ಪಾಸ್‌ವರ್ಡ್‌ಗಳನ್ನು ಸುರಕ್ಷಿತವಾಗಿ ಹಂಚಿಕೊಳ್ಳುವುದಕ್ಕೆ AirDrop ಅನ್ನು ಬಳಸಲು, iPadನಲ್ಲಿ ನೀವು ನಂಬುವ ಜನರೊಂದಿಗೆ ಪಾಸ್‌ವರ್ಡ್‌ಗಳು ಅಥವಾ ಪಾಸ್‌ಕೀಗಳನ್ನು ಹಂಚಿಕೊಳ್ಳಿ ಅನ್ನು ನೋಡಿ.

AirDrop ಮೂಲಕ ಐಟಂಗಳನ್ನು ಸ್ವೀಕರಿಸಿ

ನಿಮ್ಮ ಸಾಧನದಲ್ಲಿ, AirDrop ನೋಟಿಫಿಕೇಷನ್‌ನಲ್ಲಿನ “ಸ್ವೀಕರಿಸಿ” ಎಂಬುದನ್ನು ಟ್ಯಾಪ್ ಮಾಡಿ ಅಥವಾ ಕ್ಲಿಕ್ ಮಾಡಿ.

ಹೆಚ್ಚಿನ ಐಟಮ್‌ಗಳು ಅವುಗಳನ್ನು ಯಾವ ಆ್ಯಪ್‌ನಿಂದ ಕಳುಹಿಸಲಾಗಿದೆಯೋ ಅದರಲ್ಲಿಯೇ ಸೇವ್ ಮಾಡಲಾಗುತ್ತದೆ. ಉದಾಹರಣೆಗೆ, ಯಾರಾದರೂ ಫೋಟೋಸ್ ಆ್ಯಪ್‌ನಿಂದ ಫೋಟೋವನ್ನು ಕಳುಹಿಸಲು AirDrop ಅನ್ನು ಬಳಸಿದರೆ, ಅದನ್ನು ನಿಮ್ಮ ಸಾಧನದಲ್ಲಿರುವ ಫೋಟೋಸ್ ಆ್ಯಪ್‌ನಲ್ಲಿ ಸೇವ್ ಮಾಡಲಾಗುತ್ತದೆ.

ಸಾಧನವನ್ನು ಅವಲಂಬಿಸಿ, ನಿಮ್ಮ ಫೈಲ್‌ಗಳನ್ನು ನೀವು ಇತರ ಸ್ಥಳಗಳಲ್ಲಿ ಕಾಣಬಹುದು. iPhone ಅಥವಾ iPadನಲ್ಲಿ, ಕೆಲವು ಐಟಂಗಳು ಫೈಲ್ ಆ್ಯಪ್‌ನಲ್ಲಿ ಸೇವ್ ಆಗಬಹುದು. Macನಲ್ಲಿ, ಕೆಲವು ಐಟಂಗಳನ್ನು ಡೌನ್‌ಲೋಡ್‌ಗಳ ಫೋಲ್ಡರ್‌ನಲ್ಲಿ ಸ್ವಯಂಚಾಲಿತವಾಗಿ ಸೇವ್ ಮಾಡಲಾಗುತ್ತದೆ. ಐಟಂಗಳನ್ನು ಎಲ್ಲಿ ಸೇವ್ ಮಾಡಬೇಕು ಎಂಬುದನ್ನು ಆರಿಸಿಕೊಳ್ಳುವ ಆಯ್ಕೆಯನ್ನು ಸಹ ನೀವು ಹೊಂದಿರಬಹುದು.

ಗಮನಿಸಿ: ನೀವು Macನಲ್ಲಿನ Finderನಲ್ಲಿ AirDrop ಅನ್ನು ತೆರೆದರೆ, ಸ್ವೀಕರಿಸಲು ಅಥವಾ ನಿರಾಕರಿಸಲು ಸೂಚಿಸುವ ನೋಟಿಫಿಕೇಷನ್, ನೋಟಿಫಿಕೇಷನ್ ಸೆಂಟರ್‌ನ ಬದಲಾಗಿ ಇಲ್ಲಿ ಕಂಡುಬರುತ್ತದೆ.

ನಿಮ್ಮ Apple ಸಾಧನಗಳಲ್ಲಿನ ಒಂದರಿಂದ ಮತ್ತೊಂದಕ್ಕೆ ನೀವು ಐಟಮ್‌ಗಳನ್ನು ಕಳುಹಿಸಿದರೆ (ಉದಾಹರಣೆಗೆ, ನಿಮ್ಮ Macನಿಂದ ನಿಮ್ಮ iPadಗೆ) ಮತ್ತು ಎರಡೂ ಸಾಧನಗಳಲ್ಲಿ ನೀವು ಒಂದೇ Apple ಖಾತೆಯನ್ನು ಬಳಸಿಕೊಂಡು iCloudಗೆ ಸೈನ್-ಇನ್ ಮಾಡಿದ್ದರೆ, ಐಟಮ್ ಅನ್ನು ಸ್ವಯಂಚಾಲಿತವಾಗಿ ಸ್ವೀಕರಿಸಲಾಗುತ್ತದೆ ಮತ್ತು ಸೇವ್ ಮಾಡಲಾಗುತ್ತದೆ.

AirDropಗಾಗಿ ಮೊಬೈಲ್ ಡೇಟವನ್ನು ಆಫ್ ಮಾಡಿ

ನೀವು AirDrop ಅನ್ನು ಬಳಸುವಾಗ ಮೊಬೈಲ್ ಡೇಟ ಶುಲ್ಕಗಳು ಅನ್ವಯಿಸಬಹುದು.

ನೀವು Bluetooth ಅಥವಾ Wi-Fi ವ್ಯಾಪ್ತಿಯಿಂದ ಹೊರಗಿದ್ದಾಗ ಮೊಬೈಲ್ ಡೇಟ ಬಳಸಲು ಬಯಸದಿದ್ದರೆ, ಸೆಟ್ಟಿಂಗ್ಸ್  > ಸಾಮಾನ್ಯ > AirDrop ಎಂಬಲ್ಲಿಗೆ ಹೋಗಿ, ನಂತರ ‘ಮೊಬೈಲ್ ಡೇಟ ಬಳಸಿ’ ಎಂಬುದನ್ನು ಆಫ್ ಮಾಡಿ.

ಸಾಮಾನ್ಯವಾಗಿ ಇದು ಒಂದು-ಬಾರಿಯ ಸೆಟ್ಟಿಂಗ್ ಆಗಿರುತ್ತದೆಯಾದರೂ ನೀವು ಅದನ್ನು ಬದಲಾಯಿಸುವ ಅಗತ್ಯ ಬೀಳಬಹುದು. ಉದಾಹರಣೆಗೆ, ಪ್ರಯಾಣದ ಸಮಯದಲ್ಲಿ ಅನ್ವಯಿಸುವ ರೋಮಿಂಗ್ ಶುಲ್ಕಗಳನ್ನು ತಪ್ಪಿಸಲು ಅದನ್ನು ನೀವು ಬದಲಾಯಿಸಬೇಕಾಗಬಹುದು.

AirDrop ಕಾರ್ಯನಿರ್ವಹಿಸದಿದ್ದರೆ

  • ಕಳುಹಿಸಿದವರು ಮತ್ತು ಸ್ವೀಕೃತದಾರರಿಬ್ಬರೂ Wi-Fi ಮತ್ತು Bluetooth ಅನ್ನು ಆನ್ ಮಾಡಿದ್ದೀರಿ ಹಾಗೂ ನೀವಿಬ್ಬರೂ iPhone, iPad ಅಥವಾ Mac ಅನ್ನು ಬಳಸುತ್ತಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ.

  • ಸ್ವೀಕೃತದಾರರು ಅವರ AirDrop ಸೆಟ್ಟಿಂಗ್ಸ್ ಅನ್ನು ಪ್ರತಿಯೊಬ್ಬರೂ ಅಥವಾ ಸಂಪರ್ಕಗಳಿಂದ ಮಾತ್ರ ಸ್ವೀಕರಿಸಿ ಎಂಬುದಕ್ಕೆ ಸೆಟ್ ಮಾಡಿದ್ದಾರೆಯೇ ಎಂಬುದನ್ನು ಪರಿಶೀಲಿಸಿ.

  • AirDrop ಕೆಲಸ ಮಾಡುವಲ್ಲಿ ನಿಮಗೆ ಸಮಸ್ಯೆ ಎದುರಾಗಿದ್ದರೆ, ನಿಮ್ಮ ಸಾಧನವನ್ನು ಮರುಪ್ರಾರಂಭಿಸಿ ಮತ್ತು ಪುನಃ ಪ್ರಯತ್ನಿಸಿ.

  • ಹೆಚ್ಚುವರಿ ಬೆಂಬಲಕ್ಕಾಗಿ, ನಿಮ್ಮ iPhone ಅಥವಾ iPadನಲ್ಲಿ AirDrop ಬಳಸುವುದು ಹೇಗೆ ಎಂಬ Apple ಬೆಂಬಲ ಲೇಖನವನ್ನು ನೋಡಿ.

ಸಾಧನಗಳ ನಡುವೆ ಕಡಿಮೆ ಸಂಖ್ಯೆಯ ಫೈಲ್‌ಗಳನ್ನು ಹಂಚಿಕೊಳ್ಳಲು AirDrop ಅತ್ಯುತ್ತಮ ಆಯ್ಕೆಯಾಗಿದೆ. ನಿಮ್ಮ Mac ಮತ್ತು ಇತರ Apple ಸಾಧನಗಳ ನಡುವೆ ನೀವು ಅನೇಕ ಫೈಲ್‌ಗಳನ್ನು ಹಂಚಿಕೊಳ್ಳಲು ಬಯಸಿದರೆ, ಫೈಲ್‌ಗಳನ್ನು iPadನಿಂದ ಸಂಗ್ರಹಣಾ ಸಾಧನ, ಸರ್ವರ್ ಅಥವಾ ಕ್ಲೌಡ್‌ಗೆ ವರ್ಗಾಯಿಸುವುದು ಅನ್ನು ನೋಡಿ ಅಥವಾ iCloud ನಿಮ್ಮ ಎಲ್ಲಾ ಸಾಧನಗಳಲ್ಲಿ ಮಾಹಿತಿಯನ್ನು ಹೇಗೆ ಅಪ್ ಟು ಡೇಟ್ ಆಗಿ ಇರಿಸುತ್ತದೆ ಎಂಬುದನ್ನು ನೋಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.