ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPadನಲ್ಲಿನ Safariಯಲ್ಲಿ ಲೇಖನಗಳನ್ನು ಓದುವಾಗ ಗಮನವನ್ನು ಬೇರೆಡೆ ಸೆಳೆಯುವ ಸಂಗತಿಗಳನ್ನು ಮರೆಮಾಡುವುದು

ನ್ಯಾವಿಗೇಷನ್ ಮೆನುಗಳು ಮತ್ತು ಇತರ ಗಮನವನ್ನು ಬೇರೆಡೆ ಸೆಳೆಯುವ ಐಟಮ್‌ಗಳನ್ನು ಮರೆಮಾಡಲು ರೀಡರ್ ಅನ್ನು ಬಳಸಿ. ದೀರ್ಘವಾದ ಪುಟಗಳಲ್ಲಿ ಸಾರಾಂಶಗಳು ಮತ್ತು ಪರಿವಿಡಿಯು ಸೇರಿರುತ್ತವೆ.

ರೀಡರ್ ಅನ್ನು ತೋರಿಸಿ

ಸೂಕ್ತವಾದ ಪಠ್ಯ ಮತ್ತು ಚಿತ್ರಗಳನ್ನು ತೋರಿಸಲು ವೆಬ್‌ಪುಟವನ್ನು ರೀಡರ್ ಫಾರ್ಮ್ಯಾಟ್ ಮಾಡುತ್ತದೆ.

  1. ನಿಮ್ಮ iPadನಲ್ಲಿನ Safari ಆ್ಯಪ್‌ಗೆ ಹೋಗಿ

  2. ವೆಬ್ ಪುಟಕ್ಕೆ ಹೋಗಿ.

  3. ಬೆಂಬಲಿತ ವೆಬ್‌ಸೈಟ್‌ನಲ್ಲಿ, ಪುಟದ ಸೆಟ್ಟಿಂಗ್ಸ್ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ರೀಡರ್ ಅನ್ನು ತೋರಿಸಿ ಎಂಬುದನ್ನು ಟ್ಯಾಪ್ ಮಾಡಿ.

    ಪೂರ್ಣ ಪುಟಕ್ಕೆ ಹಿಂತಿರುಗಲು, ಪುಟದ ಸೆಟ್ಟಿಂಗ್ಸ್ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ರೀಡರ್ ಅನ್ನು ಮರೆಮಾಡಿ.

ವೆಬ್‌ಸೈಟ್‌ಗಾಗಿ ರೀಡರ್ ಅನ್ನು ಸ್ವಯಂಚಾಲಿತವಾಗಿ ಬಳಸಿ

  1. ನಿಮ್ಮ iPadನಲ್ಲಿನ Safari ಆ್ಯಪ್‌ಗೆ ಹೋಗಿ

  2. ಬೆಂಬಲಿತ ವೆಬ್‌ಸೈಟ್‌ನಲ್ಲಿ, ಪುಟದ ಸೆಟ್ಟಿಂಗ್ಸ್ ಬಟನ್ಟ್ಯಾಪ್ ಮಾಡಿ, ನಂತರ ವಿವರಗಳ ಬಟನ್ ಅನ್ನು ಟ್ಯಾಪ್ ಮಾಡಿ.

  3. ಸ್ವಯಂಚಾಲಿತವಾಗಿ ರೀಡರ್ ಅನ್ನು ಬಳಸಿ ಎಂಬುದನ್ನು ಆನ್ ಮಾಡಿ.

ಅದನ್ನು ಬೆಂಬಲಿಸುವ ಎಲ್ಲಾ ವೆಬ್‌ಸೈಟ್‌ಗಳಿಗೆ ರೀಡರ್ ಅನ್ನು ಸ್ವಯಂಚಾಲಿತವಾಗಿ ಬಳಸಲು, ಸೆಟ್ಟಿಂಗ್ಸ್  > ಆ್ಯಪ್‌ಗಳು > Safari > ರೀಡರ್ ಎಂಬಲ್ಲಿಗೆ ಹೋಗಿ, ನಂತರ ಎಲ್ಲಾ ವೆಬ್‌ಸೈಟ್‌ಗಳಿಗೂ ಇದನ್ನು ಆನ್ ಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.