ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿನ ಮತ್ತೊಂದು ಪಾಸ್‌ವರ್ಡ್ ಮ್ಯಾನೇಜರ್‌ಗೆ ಪಾಸ್‌ವರ್ಡ್‌ಗಳನ್ನು ಎಕ್ಸ್‌ಪೋರ್ಟ್ ಮಾಡುವುದು

ನೀವು ವೆಬ್‌ಸೈಟ್‌ಗಳು ಮತ್ತು ಖಾತೆಗಳ ನಿಮ್ಮ ಪಾಸ್‌ವರ್ಡ್‌ಗಳನ್ನು CSV ಫೈಲ್‌ಗೆ ಎಕ್ಸ್‌ಪೋರ್ಟ್ ಮಾಡಬಹುದು ಮತ್ತು ನಂತರ ಅವುಗಳನ್ನು ಮತ್ತೊಂದು ಪಾಸ್‌ವರ್ಡ್ ಮ್ಯಾನೇಜರ್‌ಗೆ ಇಂಪೋರ್ಟ್ ಮಾಡಬಹುದು.

ಎಚ್ಚರಿಕೆ: ನಿಮ್ಮ ಎಕ್ಸ್‌ಪೋರ್ಟ್ ಮಾಡಲಾದ ಪಾಸ್‌ವರ್ಡ್‌ಗಳನ್ನು ಎನ್‌ಕ್ರಿಪ್ಟ್ ಮಾಡಲಾಗಿಲ್ಲ ಮತ್ತು ಫೈಲ್ ಅನ್ನು ಆ್ಯಕ್ಸೆಸ್ ಮಾಡಬಲ್ಲ ಯಾರಿಗಾದರೂ ಅವುಗಳು ಗೋಚರಿಸುತ್ತವೆ. ನೀವು ಪಾಸ್‌ವರ್ಡ್‌ಗಳನ್ನು ಮತ್ತೊಂದು ಪಾಸ್‌ವರ್ಡ್ ಮ್ಯಾನೆಜರ್‌ಗೆ ಇಂಪೋರ್ಟ್ ಮಾಡಿದ ನಂತರ, ನೀವು ಎಕ್ಸ್‌ಪೋರ್ಟ್ ಮಾಡಿದ ಫೈಲ್ ಅನ್ನು ಡಿಲೀಟ್ ಮಾಡಿ.

ಮತ್ತೊಂದು ಪಾಸ್‌ವರ್ಡ್ ಮ್ಯಾನೇಜರ್‌ಗೆ ಎಕ್ಸ್‌ಪೋರ್ಟ್ ಮಾಡುವ ಆಯ್ಕೆಯನ್ನು ಆರಿಸಿರುವ ಬ್ರೌಸಿಂಗ್ ಡೇಟವನ್ನು ಎಕ್ಸ್‌ಪೋರ್ಟ್ ಮಾಡಿ ಎಂಬ ಸ್ಕ್ರೀನ್.
  1. ನಿಮ್ಮ iPhoneನಲ್ಲಿ ಸೆಟ್ಟಿಂಗ್ಸ್ ಆ್ಯಪ್‌ಗೆ ಹೋಗಿ.

  2. ಆ್ಯಪ್‌ಗಳು ಎಂಬುದನ್ನು ಟ್ಯಾಪ್ ಮಾಡಿ, ನಂತರ Safari ಅನ್ನು ಟ್ಯಾಪ್ ಮಾಡಿ.

  3. ಇತಿಹಾಸ ಮತ್ತು ವೆಬ್‌ಸೈಟ್ ಡೇಟದ ಕೆಳಗೆ, ಎಕ್ಸ್‌ಪೋರ್ಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

  4. ಪಾಸ್‌ವರ್ಡ್‌ಗಳನ್ನು ಆಯ್ಕೆಮಾಡಿ.

    ಇತರ ಆಯ್ಕೆಗಳ ಆಯ್ಕೆಯನ್ನು ರದ್ದು ಮಾಡಿ.

  5. ಡೌನ್‌ಲೋಡ್ ಮಾಡಲು ಸೇವ್ ಎಂಬುನ್ನು ಟ್ಯಾಪ್ ಮಾಡಿ.

  6. ಮುಗಿದಿದೆ ಎಂಬುದನ್ನು ಟ್ಯಾಪ್ ಮಾಡಿ.

ಗಮನಿಸಿ: ನೀವು Wi-Fi ಪಾಸ್‌ವರ್ಡ್‌ಗಳನ್ನು, ನೀವು ಗುಂಪಿನೊಂದಿಗೆ ಹಂಚಿಕೊಂಡ ಪಾಸ್‌ವರ್ಡ್‌ಗಳನ್ನು (ನೀವು ಗುಂಪನ್ನು ರಚಿಸದ ಹೊರತು) ಎಕ್ಸ್‌ಪೋರ್ಟ್ ಮಾಡಲು ಸಾಧ್ಯವಾಗುವುದಿಲ್ಲ ಅಥವಾ Apple ಖಾತೆ ಪಾಸ್‌ವರ್ಡ್‌ಗಳೊಂದಿಗೆ ಸೈನ್ ಇನ್ ಮಾಡಲು ಸಾಧ್ಯವಾಗುವುದಿಲ್ಲ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.