ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ iCloud Mailನೊಂದಿಗೆ ಕಸ್ಟಮ್ ಈಮೇಲ್‌ ಡೊಮೇನ್ ಅನ್ನು ಸೆಟಪ್ ಮಾಡಿ

ನೀವು iCloud+ಗೆ ಸಬ್‌ಸ್ಕ್ರೈಬ್ ಮಾಡಿದಾಗ, ನೀವು ಗರಿಷ್ಠ ಐದು ಕಸ್ಟಮ್ ಈಮೇಲ್‌ ಡೊಮೇನ್‌ಗಳನ್ನು ಸೇರಿಸಬಹುದು ಮತ್ತು ನಿಮ್ಮ iPhoneನಲ್ಲಿ ಆ ಡೊಮೇನ್‌ಗಳಿಗಾಗಿ ಈಮೇಲ್‌ ವಿಳಾಸಗಳನ್ನು ರಚಿಸಬಹುದು. ನಂತರ ನಿಮ್ಮ iPhone, iPad ಮತ್ತು Macನಲ್ಲಿನ Mail ಆ್ಯಪ್‌ನಲ್ಲಿ , iCloud.comನಲ್ಲಿನ ನಿಮ್ಮ Mail ಖಾತೆಯಲ್ಲಿ ಮತ್ತು Windows ಸಾಧನದಲ್ಲಿರುವ ಈಮೇಲ್ ಆ್ಯಪ್‌ನಲ್ಲಿ ನೀವು ಈಮೇಲ್ ಅನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು.

iPhoneನಲ್ಲಿ ಕಸ್ಟಮ್ ಈಮೇಲ್ ಡೊಮೇನ್ ಒಂದನ್ನು ಸೇರಿಸುವ ಮೊದಲು ನೀವು ಪ್ರಾಥಮಿಕ iCloud Mail ವಿಳಾಸವನ್ನು ಹೊಂದಿರಬೇಕಾಗುತ್ತದೆ. iCloud ಬಳಕೆದಾರರ ಗೈಡ್‌ನಲ್ಲಿ iCloud Mailಗಾಗಿ ಪ್ರಾಥಮಿಕ ಈಮೇಲ್‌ ವಿಳಾಸವನ್ನು ರಚಿಸಿ ಎಂಬುದನ್ನು ನೋಡಿ.

ಹೆಚ್ಚಿನ ಮಾಹಿತಿಗಾಗಿ, iCloud ಬಳಕೆದಾರರ ಗೈಡ್‌ನಲ್ಲಿ ಕಸ್ಟಮ್ ಈಮೇಲ್‌ನೊಂದಿಗೆ iCloud Mail ಅನ್ನು ವೈಯಕ್ತೀಕರಿಸಿ ಮತ್ತು ಇತರರೊಂದಿಗೆ ಹಂಚಿಕೊಳ್ಳಿ ಎಂಬುದನ್ನು ನೋಡಿ.

ಗಮನಿಸಿ: ನೀವು ಪ್ರತಿಯೊಂದು ಸಾಧನದಲ್ಲಿ ಒಂದೇ Apple ಖಾತೆಗೆ ಸೈನ್ ಇನ್ ಮಾಡಿದ್ದೀರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ನಿಮ್ಮ Apple ಖಾತೆಗೆ ನೀವು ಸೈನ್ ಇನ್ ಮಾಡಿರದ ಅಥವಾ Mail ಆ್ಯಪ್‌ ಫೀಚರ್ ಅನ್ನು ಆಫ್ ಮಾಡಿರುವ ಸಾಧನಗಳನ್ನು ನೀವು ಹೊಂದಿದ್ದರೆ, ಆ ಸಾಧನಗಳಲ್ಲಿ ನಿಮ್ಮ ಕಸ್ಟಮ್ ಈಮೇಲ್‌ ಡೊಮೇನ್‌ಗಳು ಮತ್ತು ಮೇಲ್ ಅನ್ನು ನೋಡಲು ನಿಮಗೆ ಸಾಧ್ಯವಾಗುವುದಿಲ್ಲ.

iCloud Mailಗೆ ಕಸ್ಟಮ್ ಈಮೇಲ್ ಡೊಮೇನ್ ಸೇರಿಸುವುದು

ಈಗಾಗಲೇ ನಿಮ್ಮ ಮಾಲೀಕತ್ವದಲ್ಲಿರುವ ಕಸ್ಟಮ್ ಈಮೇಲ್‌ ಡೊಮೇನ್ ಅನ್ನು ನೀವು iCloud Mailಗೆ ಸೇರಿಸಬಹುದು ಅಥವಾ ಹೊಸದನ್ನು ಖರೀದಿಸಬಹುದು.

ಗಮನಿಸಿ: iPhoneನಲ್ಲಿ ಕಸ್ಟಮ್ ಈಮೇಲ್ ಡೊಮೇನ್ ಒಂದನ್ನು ಸೇರಿಸುವ ಮೊದಲು ನೀವು ಪ್ರಾಥಮಿಕ iCloud Mail ವಿಳಾಸವನ್ನು ಹೊಂದಿರಬೇಕಾಗುತ್ತದೆ. iCloud ಬಳಕೆದಾರರ ಗೈಡ್‌ನಲ್ಲಿ iCloud Mailಗಾಗಿ ಪ್ರಾಥಮಿಕ ಈಮೇಲ್‌ ವಿಳಾಸವನ್ನು ರಚಿಸಿ ಎಂಬುದನ್ನು ನೋಡಿ.

  1. ಸೆಟ್ಟಿಂಗ್ಸ್  > [ನಿಮ್ಮ ಹೆಸರು] > iCloud > Mail (iCloudನಲ್ಲಿ ಸೇವ್ ಮಾಡಿರುವುದು ಎಂಬುದರ ಅಡಿಯಲ್ಲಿ) ಎಂಬಲ್ಲಿಗೆ ಹೋಗಿ, ನಂತರ “ಈ iPhoneನಲ್ಲಿ ಬಳಸಿ” ಎಂಬುದು ಆನ್ ಆಗಿದೆೆ ಎಂದು ಖಚಿತಪಡಿಸಿಕೊಳ್ಳಿ.

  2. ಕಸ್ಟಮ್ ಈಮೇಲ್‌ ಡೊಮೇನ್ ಅನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನವುಗಳಲ್ಲಿ ಒಂದನ್ನು ಟ್ಯಾಪ್ ಮಾಡಿ:

    • ಡೊಮೇನ್ ಅನ್ನು ಖರೀದಿಸಿ: ನೀವು ಇನ್ನೂ ಕಸ್ಟಮ್ ಡೊಮೇನ್ ಅನ್ನು ಹೊಂದಿರದಿದ್ದರೆ ಈ ಆಯ್ಕೆಯನ್ನು ಆರಿಸಿ. ನೀವು ಅದನ್ನು ಖರೀದಿಸಿದ ನಂತರ, ನೀವು ಕಸ್ಟಮ್ ಈಮೇಲ್ ವಿಳಾಸಗಳನ್ನು ರಚಿಸಬಹುದು.

    • ನಿಮ್ಮ ಮಾಲೀಕತ್ವದಲ್ಲಿರುವ ಡೊಮೇನ್ ಅನ್ನು ಬಳಸಿ: ನೀವು ಈಗಾಗಲೇ ಡೊಮೇನ್ ಒಂದನ್ನು ಹೊಂದಿದ್ದರೆ ಮತ್ತು ನೀವು ಇದನ್ನು iCloud Mailನೊಂದಿಗೆ ಬಳಸಲು ಬಯಸಿದರೆ ಈ ಆಯ್ಕೆಯನ್ನು ಆರಿಸಿ. ನೀವು ಈಗಾಗಲೇ ಆ ಡೊಮೇನ್‌ನಲ್ಲಿ ಹೊಂದಿರುವ ಈಮೇಲ್‌ ವಿಳಾಸಗಳನ್ನು ಕಾನ್ಫಿಗರ್ ಮಾಡಬಹುದು ಮತ್ತು ಇನ್ನಷ್ಟು ರಚಿಸಬಹುದು.

  3. ಸ್ಕ್ರೀನ್ ಮೇಲಿನ ಸೂಚನೆಗಳನ್ನು ಅನುಸರಿಸಿ.

    ಈಗಾಗಲೇ ನಿಮ್ಮ ಮಾಲೀಕತ್ವದಲ್ಲಿರುವ ಡೊಮೇನ್ ಅನ್ನು ನೀವು ಸೇರಿಸುತ್ತಿದ್ದರೆ, ಕೆಲವು ರಿಜಿಸ್ಟ್ರಾರ್‌ಗಳಿಗಾಗಿ ನಿಮ್ಮ ಡೊಮೇನ್ ಅನ್ನು ಸೆಟಪ್ ಮಾಡಲು ನೀವು DNS ದಾಖಲೆಗಳನ್ನು ಬದಲಾಯಿಸಬೇಕಾಗುತ್ತದೆ. iCloud Mailನೊಂದಿಗೆ ಅಸ್ತಿತ್ವದಲ್ಲಿರುವ ಡೊಮೇನ್ ಅನ್ನು ಸೆಟಪ್ ಮಾಡುವುದು ಎಂಬ Apple ಬೆಂಬಲ ಲೇಖನವನ್ನು ನೋಡಿ.

ಅಸ್ತಿತ್ವದಲ್ಲಿರುವ ಈಮೇಲ್‌ ಸಂದೇಶಗಳನ್ನು ಇಂಪೋರ್ಟ್ ಮಾಡಿ

ನೀವು ಅಥವಾ ನಿಮ್ಮ ಕುಟುಂಬ ಹಂಚಿಕೊಳ್ಳುವಿಕೆ ಗುಂಪಿನ ಸದಸ್ಯರು iCloud Mailಗಾಗಿ ಕಸ್ಟಮ್ ಈಮೇಲ್‌ ಡೊಮೇನ್ ಅನ್ನು ಸೆಟಪ್ ಮಾಡಿದ ನಂತರ, ಅಸ್ತಿತ್ವದಲ್ಲಿರುವ ಈಮೇಲ್ ಸಂದೇಶಗಳನ್ನು ನಿಮ್ಮ ಹಿಂದಿನ ಈಮೇಲ್‌ ಪೂರೈಕೆದಾರರಿಂದ (ಎಲ್ಲಾ ಈಮೇಲ್‌ ಪೂರೈಕೆದಾರರಿಗೆ ಲಭ್ಯವಿಲ್ಲ) ಇಂಪೋರ್ಟ್ ಮಾಡಿಕೊಳ್ಳಲು ನೀವು iCloud.com ಅನ್ನು ಬಳಸಬಹುದು. ನಿಮ್ಮ iCloud ಬಳಕೆದಾರರ ಗೈಡ್‌ನಲ್ಲಿ ಅಸ್ತಿತ್ವದಲ್ಲಿರುವ ಈಮೇಲ್‌ ಸಂದೇಶಗಳನ್ನು ನಿಮ್ಮ ಕಸ್ಟಮ್ iCloud Mail ವಿಳಾಸಕ್ಕೆ ಇಂಪೋರ್ಟ್ ಮಾಡಿ ಎಂಬುದನ್ನು ನೋಡಿ.

ಈಮೇಲ್‌ ವಿಳಾಸಗಳನ್ನು ರಚಿಸಿ ಮತ್ತು ಡಿಲೀಟ್ ಮಾಡಿ

ನೀವು ಕಸ್ಟಮ್ ಈಮೇಲ್ ಡೊಮೇನ್ ಅನ್ನು ಸೇರಿಸಿದ ನಂತರ, ನೀವು ಆ ಡೊಮೇನ್‌ಗಾಗಿ ಈಮೇಲ್ ವಿಳಾಸಗಳನ್ನು ಸುಲಭವಾಗಿ ರಚಿಸಬಹುದು ಮತ್ತು ಡಿಲೀಟ್ ಮಾಡಬಹುದು.

  1. ಸೆಟ್ಟಿಂಗ್ಸ್  > [ನಿಮ್ಮ ಹೆಸರು] > iCloud > Mail (iCloudನಲ್ಲಿ ಸೇವ್ ಮಾಡಿರುವುದು ಎಂಬುದರ ಅಡಿಯಲ್ಲಿ) ಎಂಬಲ್ಲಿಗೆ ಹೋಗಿ, ನಂತರ “ಈ iPhoneನಲ್ಲಿ ಬಳಸಿ” ಎಂಬುದು ಆನ್ ಆಗಿದೆೆ ಎಂದು ಖಚಿತಪಡಿಸಿಕೊಳ್ಳಿ.

  2. ಕಸ್ಟಮ್ ಈಮೇಲ್‌ ಡೊಮೇನ್ ಅನ್ನು ಟ್ಯಾಪ್ ಮಾಡಿ, ನಂತರ ನೀವು ಬದಲಾವಣೆಗಳನ್ನು ಮಾಡಲು ಬಯಸುವ ಡೊಮೇನ್ ಅನ್ನು ಟ್ಯಾಪ್ ಮಾಡಿ.

  3. ಈಮೇಲ್‌ ವಿಳಾಸಗಳನ್ನು ನಿರ್ವಹಿಸಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಈ ಕೆಳಗಿನವುಗಳಲ್ಲಿ ಒಂದನ್ನು ಮಾಡಿ:

    • ಹೊಸ ಈಮೇಲ್ ವಿಳಾಸವನ್ನು ಸೇರಿಸಿ: ಈಮೇಲ್‌ ವಿಳಾಸವನ್ನು ರಚಿಸಿ ಎಂಬುದನ್ನು ಟ್ಯಾಪ್ ಮಾಡಿ, ಹೊಸ ವಿಳಾಸವನ್ನು ನಮೂದಿಸಿ, ನಂತರ ಮುಂದುವರಿಸಿ ಎಂಬುದನ್ನು ಟ್ಯಾಪ್ ಮಾಡಿ.

    • ಈಮೇಲ್ ವಿಳಾಸವನ್ನು ಡಿಲೀಟ್ ಮಾಡಿ: ಈಮೇಲ್‌ ವಿಳಾಸವನ್ನು ಸ್ವೈಪ್ ಮಾಡಿ, ಡಿಲೀಟ್ ಮಾಡಿ ಅನ್ನು ಟ್ಯಾಪ್ ಮಾಡಿ, ನಂತರ ತೆಗೆದುಹಾಕಿ ಎಂಬುದನ್ನು ಟ್ಯಾಪ್ ಮಾಡಿ.

    • ಜನರನ್ನು ಸೇರಿಸಿ: ನಿಮ್ಮ ಕಸ್ಟಮ್ ಈಮೇಲ್‌ ಡೊಮೇನ್‌ಗೆ ಯಾರನ್ನಾದರೂ ಆಹ್ವಾನಿಸಲು ಟ್ಯಾಪ್ ಮಾಡಿ.

ಕಸ್ಟಮ್ ಈಮೇಲ್‌ ಡೊಮೇನ್ ಅನ್ನು ತೆಗೆದುಹಾಕಿ

ನೀವು ಇನ್ನು ಮುಂದೆ ಕಸ್ಟಮ್ ಈಮೇಲ್‌ ಡೊಮೇನ್ ಅನ್ನು ಬಳಸಲು ಬಯಸದಿದ್ದರೆ, ನಿಮ್ಮ iPhone ಬಳಸಿ ನೀವು ಅದನ್ನು ತೆಗೆದುಹಾಕಬಹುದು. ನೀವು ಕಸ್ಟಮ್ ಈಮೇಲ್‌ ಡೊಮೇನ್ ಅನ್ನು ತೆಗೆದುಹಾಕಿದಾಗ, Mail ಆ್ಯಪ್‌ನಲ್ಲಿ ಆ ಡೊಮೇನ್‌ನಲ್ಲಿರುವ ಯಾವುದೇ ವಿಳಾಸಗಳಿಗೆ ಈಮೇಲ್‌ ಅನ್ನು ಕಳುಹಿಸಲು ಅಥವಾ ಸ್ವೀಕರಿಸಲು ನಿಮಗೆ ಸಾಧ್ಯವಾಗುವುದಿಲ್ಲ.

  1. ಸೆಟ್ಟಿಂಗ್ಸ್  > [ ನಿಮ್ಮ ಹೆಸರು] > iCloud > Mail ಆ್ಯಪ್‌ಗೆ ಹೋಗಿ, (iCloudನಲ್ಲಿ ಸೇವ್ ಮಾಡಿರುವುದು ಎಂಬುದರ ಅಡಿಯಲ್ಲಿ)

  2. ಕಸ್ಟಮ್ ಈಮೇಲ್‌ ಡೊಮೇನ್ ಅನ್ನು ಟ್ಯಾಪ್ ಮಾಡಿ, ನಂತರ ನಿಮ್ಮ ಡೊಮೇನ್‌ಗಳ ಪಕ್ಕದಲ್ಲಿರುವ ಎಡಿಟ್ ಎಂಬುದನ್ನು ಟ್ಯಾಪ್ ಮಾಡಿ.

  3. ಡಿಲೀಟ್ ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಡಿಲೀಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

  4. ನಿಮ್ಮ ಡೊಮೇನ್ ಅನ್ನು ನೀವು ಹೊಸ ಪೂರೈಕೆದಾರರಿಗೆ ಸ್ಥಳಾಂತರಿಸುತ್ತಿದ್ದರೆ, ಈ ಕೆಳಗಿನವುಗಳನ್ನು ತಪ್ಪದೇ ಮಾಡಿ:

    • ‌ಡೊಮೇನ್ ದಾಖಲೆಗಳನ್ನು ನಿಮ್ಮ ಹೊಸ ಈಮೇಲ್ ಪೂರೈಕೆದಾರರಿಗೆ ಅಪ್‌ಡೇಟ್ ಮಾಡಲು ನಿಮ್ಮ ಡೊಮೇನ್ ರೆಜಿಸ್ಟ್ರಾರ್‌ಗೆ ಹೋಗಿ ಮತ್ತು iCloud ಸಂಬಂಧಿತ ದಾಖಲೆಗಳನ್ನು ತೆಗೆದುಹಾಕಿ.

    • ನಿಮ್ಮ ಹೊಸ ಪೂರೈಕೆದಾರರೊಂದಿಗೆ ನೀವು ಬಳಸುವುದನ್ನು ಮುಂದುವರಿಸಲು ಬಯಸುವ ಯಾವುದೇ ಈಮೇಲ್‌ ವಿಳಾಸಗಳನ್ನು ಸೆಟಪ್ ಮಾಡಿ.

ಗಮನಿಸಿ: ನೀವು ಕಸ್ಟಮ್ ಈಮೇಲ್‌ ಡೊಮೇನ್ ಅನ್ನು ತೆಗೆದುಹಾಕಿದಾಗ, ನಿಮ್ಮ ಪ್ರಾಥಮಿಕ @icloud.com ವಿಳಾಸದಿಂದ ನೀವು ಈಗಲೂ ಈಮೇಲ್‌ ಅನ್ನು ಕಳುಹಿಸಬಹುದು ಮತ್ತು ಸ್ವೀಕರಿಸಬಹುದು.

ನಿಮ್ಮ ಡೊಮೇನ್‌ಗೆ ಎಲ್ಲಾ ಒಳಬರುವ ಸಂದೇಶಗಳನ್ನು ಅನುಮತಿಸುವುದು

ನಿಮ್ಮ iCloud Mail ಈಮೇಲ್ ವಿಳಾಸವನ್ನು ನೀವು ಕ್ಯಾಚ್-ಆಲ್ ವಿಳಾಸವಾಗಿ ಬಳಸಬಹುದು. ಅವುಗಳನ್ನು ಕಳುಹಿಸಿರುವ ನಿಖರವಾದ ವಿಳಾಸಗಳನ್ನು ಈಗಾಗಲೇ ರಚಿಸಿದಿದ್ದರೂ ಸಹ, ಇದು ನಿಮ್ಮ ಕಸ್ಟಮ್ ಈಮೇಲ್ ಡೊಮೇನ್‌ಗೆ ಕಳುಹಿಸಲಾದ ಎಲ್ಲಾ ಸಂದೇಶಗಳನ್ನು ಸ್ವೀಕರಿಸಲು ನಿಮಗೆ ಅನುವು ಮಾಡಿಕೊಡುತ್ತದೆ.

  1. ಸೆಟ್ಟಿಂಗ್ಸ್  > [ ನಿಮ್ಮ ಹೆಸರು] > iCloud > Mail ಆ್ಯಪ್‌ಗೆ ಹೋಗಿ, (iCloudನಲ್ಲಿ ಸೇವ್ ಮಾಡಿರುವುದು ಎಂಬುದರ ಅಡಿಯಲ್ಲಿ)

  2. ಕಸ್ಟಮ್ ಈಮೇಲ್‌ ಡೊಮೇನ್ ಅನ್ನು ಟ್ಯಾಪ್ ಮಾಡಿ, ನಂತರ ನಿಮ್ಮ ಕಸ್ಟಮ್ ಡೊಮೇನ್ ಅನ್ನು ಟ್ಯಾಪ್ ಮಾಡಿ.

  3. ಎಲ್ಲಾ ಒಳಬರುವ ಸಂದೇಶಗಳನ್ನು ಅನುಮತಿಸಿ ಎಂಬುದನ್ನು ಆನ್ ಮಾಡಿ.

ಡೊಮೇನ್ ಮಾಲೀಕರು ಎಲ್ಲಾ ಒಳಬರುವ ಸಂದೇಶಗಳನ್ನು ಅನುಮತಿಸಿದರೆ, ಸಕ್ರಿಯ ಈಮೇಲ್‌ ವಿಳಾಸಕ್ಕೆ ಕಳುಹಿಸಿರದ ಯಾವುದೇ ಸಂದೇಶಗಳು ಡೊಮೇನ್ ಮಾಲೀಕರ ಇಬ್‌ಬಾಕ್ಸ್‌ಗೆ ಹೋಗುತ್ತವೆ. ಈ ಸೆಟ್ಟಿಂಗ್ ಅನ್ನು ಆನ್ ಮಾಡಿರದಿದ್ದರೆ, ಆ ಸಂದೇಶಗಳನ್ನು ಕಳುಹಿಸುವವರಿಗೆ ಹಿಂತಿರುಗಿಸಲಾಗುತ್ತದೆ.

ಗಮನಿಸಿ: ಡಿಲೀಟ್ ಮಾಡಲಾದ ಈಮೇಲ್‌ ವಿಳಾಸಗಳಿಗೆ ಕಳುಹಿಸಲಾದ ಸಂದೇಶಗಳನ್ನು, ಅವುಗಳನ್ನು ಕಳುಹಿಸಿದವರಿಗೆ ಸ್ವಯಂಚಾಲಿತವಾಗಿ ಹಿಂತಿರುಗಿಸಲಾಗುತ್ತದೆ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.