ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿ ಸಬ್‌ಟೈಟಲ್‌ಗಳು ಮತ್ತು ಕ್ಯಾಪ್ಶನ್‌ಗಳನ್ನು ಪ್ರದರ್ಶಿಸುವುದು

ನಿಮಗೆ ಆಡಿಯೊ ಮತ್ತು ವೀಡಿಯೊಗಳನ್ನು ಸುಲಭವಾಗಿ ಅನುಸರಿಸಲು ಸಾಧ್ಯವಾಗುವಂತೆ ಸಬ್‌ಟೈಟಲ್‌ಗಳು, ಕ್ಲೋಸ್ಡ್ ಕ್ಯಾಪ್ಶನ್‌ಗಳು ಮತ್ತು ಟ್ರಾನ್ಸ್‌ಕ್ರಿಪ್ಷನ್‌ಗಳನ್ನು iPhone ಒದಗಿಸಬಲ್ಲದು.

Apple TV ಆ್ಯಪ್‌ನಲ್ಲಿ ಸಬ್‌ಟೈಟಲ್‌ಗಳು ಮತ್ತು ಕ್ಯಾಪ್ಶನ್‌ಗಳನ್ನು ಆನ್ ಮಾಡುವುದು

ಬೆಂಬಲಿತ ಆ್ಯಪ್‌ನಲ್ಲಿ ನೀವು ವೀಡಿಯೊ ಕಂಟೆಂಟ್ ಅನ್ನು ಪ್ಲೇ ಮಾಡಿದಾಗ, ನೀವು ಸಬ್‌ಟೈಟಲ್‌ಗಳು ಮತ್ತು ಕ್ಲೋಸ್ಡ್ ಕ್ಯಾಪ್ಶನ್‌ಗಳನ್ನು ಆನ್ ಮಾಡಬಹುದು (ಲಭ್ಯವಿದ್ದರೆ). iPhone ಸಾಮಾನ್ಯವಾಗಿ ಸ್ಟ್ಯಾಂಡರ್ಡ್ ಸಬ್‌ಟೈಟಲ್‌ಗಳು ಮತ್ತು ಕ್ಯಾಪ್ಶನ್‌ಗಳನ್ನು ತೋರಿಸುತ್ತದೆ, ಆದರೆ ಕಿವುಡರಿಗಾಗಿ ಮತ್ತು ಶ್ರವಣದೋಷವುಳ್ಳವರಿಗಾಗಿ ರಚಿಸಲಾದ ಸಬ್‌ಟೈಟಲ್‌ಗಳ (SDH) ರೀತಿಯ ವಿಶೇಷವಾಗಿ ಆಕ್ಸೆಸ್ ಮಾಡಬಹುದಾದ ಕ್ಯಾಪ್ಶನ್‌ಗಳು ಲಭ್ಯವಿದ್ದಾಗ ಅವುಗಳನ್ನು ಸಹ ಆಯ್ಕೆಮಾಡಬಹುದು.

  1. ವೀಡಿಯೊ ಕಂಟೆಂಟ್ ಅನ್ನು ಪ್ಲೇ ಮಾಡುವಾಗ, ಇನ್ನಷ್ಟು ಕಂಟ್ರೋಲ್‌ಗಳು ಬಟನ್ ಅನ್ನು ಟ್ಯಾಪ್ ಮಾಡಿ, ನಂತರ ಸಬ್‌ಟೈಟಲ್‌ಗಳು ಎಂಬುದನ್ನು ಟ್ಯಾಪ್ ಮಾಡಿ.

  2. ಲಭ್ಯವಿರುವ ಸಬ್‌ಟೈಟಲ್‌ಗಳು ಮತ್ತು ಕ್ಯಾಪ್ಶನ್‌ಗಳ ಪಟ್ಟಿಯಿಂದ ಆರಿಸಿ.

ಬೆಂಬಲಿತ ವೀಡಿಯೊ ಆ್ಯಪ್‌ಗಳಲ್ಲಿ ಸಬ್‌ಟೈಟಲ್‌ಗಳು ಮತ್ತು ಕ್ಯಾಪ್ಶನ್‌ಗಳನ್ನು ಕಸ್ಟಮೈಸ್ ಮಾಡುವುದು

ಕಸ್ಟಮ್ ಶೈಲಿಯೊಂದಿಗೆ ಸಬ್‌ಟೈಟಲ್‌ಗಳ ಉದಾಹರಣೆಯನ್ನು ತೋರಿಸುವ iPhone.
  1. ಸೆಟ್ಟಿಂಗ್ಸ್ ಆ್ಯಪ್  > ಆ್ಯಕ್ಸೆಸಬಿಲಿಟಿ > ಸಬ್‌ಟೈಟಲ್‌ಗಳು ಮತ್ತು ಕ್ಯಾಪ್ಶನಿಂಗ್ ಎಂಬಲ್ಲಿಗೆ ಹೋಗಿ.

  2. ನೀವು ಕಿವುಡರಿಗಾಗಿ ಮತ್ತು ಶ್ರವಣ ದೋಷವುಳ್ಳವರಿಗಾಗಿ ಕ್ಲೋಸ್ಡ್ ಕ್ಯಾಪ್ಶನಿಂಗ್ ಅಥವಾ ಸಬ್‌ಟೈಟಲ್‌ಗಳನ್ನು ಬಯಸಿದರೆ, ಅವುಗಳು ಲಭ್ಯವಿದ್ದಾಗ ಕ್ಲೋಸ್ಡ್ ಕ್ಯಾಪ್ಶನ್ಸ್ + SDH ಎಂಬುದನ್ನು ಆನ್ ಮಾಡಿ.

  3. ಶೈಲಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಅಸ್ತಿತ್ವದಲ್ಲಿರುವ ಕ್ಯಾಪ್ಶನ್ ಶೈಲಿಯನ್ನು ಆರಿಸಿ ಅಥವಾ ಈ ಕೆಳಗಿನವುಗಳ ಆಧಾರದ ಮೇಲೆ ಹೊಸ ಶೈಲಿಯನ್ನು ರಚಿಸಿ:

    • ಫಾಂಟ್, ಗಾತ್ರ ಮತ್ತು ಬಣ್ಣ

    • ಹಿನ್ನೆಲೆ ಬಣ್ಣ ಮತ್ತು ಒಪ್ಯಾಸಿಟಿ

    • ಪಠ್ಯ ಒಪ್ಯಾಸಿಟಿ, ಅಂಚಿನ ಶೈಲಿ ಮತ್ತು ಹೈಲೈಟ್

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.