iPhoneನಲ್ಲಿರುವ Apple Musicಗೆ ಇತರ ಸಂಗೀತ ಸೇವೆಗಳಿಂದ ಸಂಗೀತವನ್ನು ವರ್ಗಾಯಿಸುವುದು

ನೀವು Apple Musicಗೆ ಸಬ್‌ಸ್ಕ್ರೈಬ್ ಮಾಡಿದರೆ, ನೀವು ಸೇವ್ ಮಾಡಿದ ಸಂಗೀತ ಮತ್ತು ಥರ್ಡ್ ಪಾರ್ಟಿ ಸಂಗೀತ ಸೇವೆಗಳಲ್ಲಿ ರಚಿಸಿದ ಪ್ಲೇಲಿಸ್ಟ್‌ಗಳನ್ನು ನಿಮ್ಮ Apple Music ಲೈಬ್ರರಿಗೆ ಸೇರಿಸಬಹುದು.

ಗಮನಿಸಿ: Apple Musicಗೆ ಸಂಗೀತವನ್ನು ವರ್ಗಾಯಿಸುವ ಸೌಲಭ್ಯವನ್ನು ಥರ್ಡ್ ಪಾರ್ಟಿ ಒದಗಿಸುತ್ತದೆ. Apple Music ಮತ್ತು ಥರ್ಡ್ ಪಾರ್ಟಿ ಸಂಗೀತ ಸೇವೆಗಳಿಂದ ಸಂಗೀತವನ್ನು ವರ್ಗಾಯಿಸುವ ಫೀಚರ್ ಎಲ್ಲಾ ದೇಶಗಳು ಅಥವಾ ಪ್ರದೇಶಗಳಲ್ಲಿ ಲಭ್ಯವಿಲ್ಲ. Apple ಮೀಡಿಯಾ ಸೇವೆಗಳ ಲಭ್ಯತೆ ಎಂಬ Apple ಬೆಂಬಲ ಲೇಖನವನ್ನು ನೋಡಿ.

ನೀವು ಪ್ರಾರಂಭಿಸುವ ಮೊದಲು

ಈ ಕೆಳಗಿನವುಗಳನ್ನು ಖಚಿತಪಡಿಸಿಕೊಳ್ಳಿ:

  • ನೀವು iOS 18.4 ಅಥವಾ ನಂತರದ ಆವೃತ್ತಿಯನ್ನು ಬಳಸುತ್ತಿದ್ದೀರಿ ಮತ್ತು ನಿಮ್ಮ Apple ಖಾತೆಗೆ ಸೈನ್ ಇನ್ ಆಗಿದ್ದೀರಿ.

  • ಸಂಗೀತವನ್ನು ವರ್ಗಾಯಿಸಲು ಸೆಟ್ಟಿಂಗ್ಸ್‌ನಲ್ಲಿ ಲೈಬ್ರರಿಯನ್ನು ಸಿಂಕ್ ಮಾಡಿ ಆನ್ ಆಗಿದೆ. ಸೆಟ್ಟಿಂಗ್ಸ್  > ಆ್ಯಪ್‌ಗಳು > ಸಂಗೀತ ಎಂಬಲ್ಲಿಗೆ ಹೋಗಿ, ನಂತರ ಲೈಬ್ರರಿಯನ್ನು ಸಿಂಕ್ ಮಾಡಿ ಎಂಬುದು ಈಗಾಗಲೇ ಆನ್ ಆಗಿಲ್ಲದಿದ್ದರೆ, ಅದನ್ನು ಆನ್ ಮಾಡಿ.

ಥರ್ಡ್ ಪಾರ್ಟಿ ಸಂಗೀತ ಸೇವೆಗಳಿಂದ ಸಂಗೀತವನ್ನು ವರ್ಗಾಯಿಸುವುದು

  1. ನಿಮ್ಮ iPhoneನಲ್ಲಿ ಸಂಗೀತ ಆ್ಯಪ್‌ಗೆ  ಹೋಗಿ.

  2. ಮೇಲಿನ ಬಲ ಮೂಲೆಯಲ್ಲಿರುವ ನಿಮ್ಮ ಪ್ರೊಫೈಲ್ ಅನ್ನು ಟ್ಯಾಪ್ ಮಾಡಿ.

  3. ಇತರ ಸೇವೆಗಳಿಂದ ಸಂಗೀತವನ್ನು ವರ್ಗಾಯಿಸಿ ಎಂಬುದನ್ನು ಟ್ಯಾಪ್ ಮಾಡಿ.

    ನಮಗೆ ಈ ಆಯ್ಕೆಯು ಕಾಣಿಸದಿದ್ದರೆ, ನಿಮ್ಮ Apple ಖಾತೆಗೆ ನೀವು ಸೈನ್ ಇನ್ ಮಾಡಬೇಕಾಗುತ್ತದೆ.

  4. ಸಂಗೀತ ಸೇವೆಯನ್ನು ಆಯ್ಕೆಮಾಡಿ, ನಂತರ ಸೇವೆಗೆ ಸೈನ್ ಇನ್ ಮಾಡಿ.

  5. ನೀವು ವರ್ಗಾಯಿಸಲು ಬಯಸುವುದನ್ನು ಆಯ್ಕೆಮಾಡಿ (ಎಲ್ಲಾ ಅಥವಾ ಆಯ್ದ ಐಟಮ್‌ಗಳು), ನಂತರ ಲೈಬ್ರರಿಗೆ ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.

    ಗಮನಿಸಿ: ಥರ್ಡ್ ಪಾರ್ಟಿ ಸಂಗೀತ ಸೇವೆಯನ್ನು ಅವಲಂಬಿಸಿ, ನಿಮಗೆ ಎಲ್ಲಾ ಸಂಗೀತವನ್ನು ಅಥವಾ ಕೆಲವು ಐಟಮ್‌ಗಳನ್ನು ಮಾತ್ರ (ಉದಾಹರಣೆಗೆ, ನೀವು ರಚಿಸಿದ ಪ್ಲೇಲಿಸ್ಟ್‌ಗಳು ಮಾತ್ರ) ವರ್ಗಾಯಿಸಲು ಸಾಧ್ಯವಾಗಬಹುದು.

  6. ವರ್ಗಾವಣೆ ಪೂರ್ಣಗೊಂಡಾಗ, ಈ ಕೆಳಗಿನ ಸಂದೇಶಗಳಲ್ಲೊಂದು ಸ್ಕ್ರೀನ್‌ನ ಮೇಲ್ಭಾಗದಲ್ಲಿ ಕಾಣಿಸಿಕೊಳ್ಳುತ್ತದೆ:

    • ವರ್ಗಾವಣೆ ಪೂರ್ಣಗೊಂಡಿದೆ: ವರ್ಗಾವಣೆ ಯಶಸ್ವಿಯಾಗಿ ಪೂರ್ಣಗೊಂಡಿದೆ ಮತ್ತು ನಿಮ್ಮ ಲೈಬ್ರರಿಗೆ ಸೇರಿಸಲಾದ ಸಂಗೀತದ ಸಾರಾಂಶವನ್ನು ನಿಮಗೆ ಕಾಣಿಸುತ್ತದೆ. ಸರಿ ಎಂಬುದನ್ನು ಟ್ಯಾಪ್ ಮಾಡಿ.

    • ಕೆಲವು ಸಂಗೀತವನ್ನು ಪರಿಶೀಲಿಸಬೇಕಿದೆ: ವರ್ಗಾವಣೆ ಪೂರ್ಣಗೊಂಡಿದೆ, ಆದರೆ ಕೆಲವು ಸಂಗೀತವನ್ನು ವರ್ಗಾಯಿಸಲಾಗಿಲ್ಲ. ಲಭ್ಯವಿದ್ದರೆ ನೀವು ಪರ್ಯಾಯ ಆವೃತ್ತಿಗಳನ್ನು ಪರಿಶೀಲಿಸಬಹುದು ಮತ್ತು ಆಯ್ಕೆ ಮಾಡಬಹುದು (ಉದಾಹರಣೆಗೆ, ಥರ್ಡ್ ಪಾರ್ಟಿ ಸಂಗೀತ ಸೇವೆಯಿಂದ ಹಾಡಿನ ಲೈವ್ ಆವೃತ್ತಿಯು Apple Music ಕ್ಯಾಟಲಾಗ್‌ನಲ್ಲಿ ಸಿಗಲಿಲ್ಲ, ಆದರೆ ಡಿಲಕ್ಸ್ ಆವೃತ್ತಿ ಲಭ್ಯವಿತ್ತು). ವರ್ಗಾವಣೆಯನ್ನು ಪರಿಶೀಲಿಸುವುದು ಅನ್ನು ನೋಡಿ.

ವರ್ಗಾವಣೆಯನ್ನು ಪರಿಶೀಲಿಸುವುದು

ವರ್ಗಾವಣೆಯ ಸಮಯದಲ್ಲಿ, ಥರ್ಡ್ ಪಾರ್ಟಿ ಸಂಗೀತ ಸೇವೆಯಿಂದ ಸಂಗೀತವನ್ನು Apple Music ಕ್ಯಾಟಲಾಗ್‌ನಲ್ಲಿ ನೀಡಲಾಗುವ ಅದೇ ಸಂಗೀತದೊಂದಿಗೆ ಹೊಂದಿಕೆ ಮಾಡಲಾಗುತ್ತದೆ. (ಇತರೆ ಸಂಗೀತ ಸೇವೆಯಿಂದ ಏನನ್ನೂ ತೆಗೆದುಹಾಕಲಾಗಿಲ್ಲ.)

ಕೆಲವೊಮ್ಮೆ Apple Music ಕ್ಯಾಟಲಾಗ್‌ನಲ್ಲಿ ಥರ್ಡ್ ಪಾರ್ಟಿ ಸಂಗೀತ ಸೇವೆಯಿಂದ ಯಾವುದೇ ಹಾಡು, ಸಂಗೀತದ ವೀಡಿಯೊ ಅಥವಾ ಆಲ್ಬಮ್‌ಗಾಗಿ ಯಾವುದೇ ಹೊಂದಾಣಿಕೆಗಳು ಇರುವುದಿಲ್ಲ. ಹೊಂದಾಣಿಕೆಗಳನ್ನು ಪರಿಶೀಲಿಸುವಾಗ, ನೀವು ಒದಗಿಸಲಾದ ಪರ್ಯಾಯಗಳಿಂದ ಆಯ್ಕೆ ಮಾಡಬಹುದು ಅಥವಾ ಸಲಹೆಗಳನ್ನು ನಿರ್ಲಕ್ಷಿಸಬಹುದು.

  1. ನಿಮ್ಮ iPhoneನಲ್ಲಿ, ಈ ಕೆಳಗಿನವುಗಳಲ್ಲಿ ಯಾವುದಾದರೂ ಒಂದನ್ನು ಮಾಡಿ:

    • ಸಂಗೀತ ಆ್ಯಪ್‌ಗೆ ಹೋಗಿ, ನಂತರ ಲೈಬ್ರರಿ ಟ್ಯಾಬ್‌ನ ಮೇಲ್ಭಾಗದಲ್ಲಿ, ಕೆಲವು ಸಂಗೀತಕ್ಕೆ ಪರಿಶೀಲನೆ ಅಗತ್ಯವಿದೆ ಎಂಬ ಸಂದೇಶದಲ್ಲಿ ಈಗಲೇ ಪರಿಶೀಲಿಸಿ ಎಂಬುದನ್ನು ಟ್ಯಾಪ್ ಮಾಡಿ.

    • ಸೆಟ್ಟಿಂಗ್ಸ್  > ಆ್ಯಪ್‌ಗಳು > ಸಂಗೀತ ಎಂಬಲ್ಲಿಗೆ ಹೋಗಿ, ನಂತರ ಪ್ರಸ್ತುತ ವರ್ಗಾವಣೆಯನ್ನು ಪರಿಶೀಲಿಸಿ ಎಂಬುದನ್ನು ಟ್ಯಾಪ್ ಮಾಡಿ.

  2. ಪರ್ಯಾಯಗಳನ್ನು ಪರಿಶೀಲಿಸಿ ಸ್ಕ್ರೀನ್‌ನಲ್ಲಿ, ಪರಿಶೀಲನೆ ಅಗತ್ಯವಿರುವ ಪ್ರತಿಯೊಂದು ಐಟಮ್‌ಗೂ ಈ ಕೆಳಗಿನವುಗಳಲ್ಲಿ ಯಾವುದನ್ನಾದರೂ ಮಾಡಿ:

    • ಪರ್ಯಾಯ ಆವೃತ್ತಿಯನ್ನು ಆರಿಸಿ: ಥರ್ಡ್ ಪಾರ್ಟಿ ಸಂಗೀತ ಸೇವೆಯಿಂದ ಮೂಲ ಹಾಡಿಗೆ ಸಂಭಾವ್ಯ ಹೊಂದಾಣಿಕೆಯಾಗಿ ತೋರಿಸಿರುವ ಐಟಮ್‌ಗಳಲ್ಲಿ ಒಂದನ್ನು ಆಯ್ಕೆ ಮಾಡಿ. ಹಾಡನ್ನು ಪ್ರಿವ್ಯೂ ಮಾಡಲು, ಆಲ್ಬಮ್ ಕವರ್‌ನಲ್ಲಿರುವ ಪ್ಲೇ ಬಟನ್ ಅನ್ನು ಟ್ಯಾಪ್ ಮಾಡಿ.

    • ಐಟಮ್ ಅನ್ನು ವರ್ಗಾಯಿಸಬೇಡಿ: ನಿಮ್ಮ Apple Music ಲೈಬ್ರರಿಗೆ ಪರ್ಯಾಯ ಆವೃತ್ತಿಯನ್ನು ವರ್ಗಾಯಿಸಲು ನೀವು ಬಯಸದಿದ್ದರೆ, “[ಐಟಮ್] ಅನ್ನು ನಿರ್ಲಕ್ಷಿಸಿ” ಎಂಬುದನ್ನು ಟ್ಯಾಪ್ ಮಾಡಿ. ವರ್ಗಾವಣೆಯನ್ನು ಅಂತಿಮಗೊಳಿಸಲು ಮತ್ತು ಹೊಸ ವರ್ಗಾವಣೆಯನ್ನು ಪ್ರಾರಂಭಿಸಲು ನೀವು ಎಲ್ಲವನ್ನೂ ನಿರ್ಲಕ್ಷಿಸಿ ಎಂಬುದನ್ನು ಸಹ ಟ್ಯಾಪ್ ಮಾಡಬಹುದು.

      ಪರ್ಯಾಯ ಸಲಹೆಗಳನ್ನು ಹೊಂದಿರದ ಸಂಗೀತವನ್ನು ಪರ್ಯಾಯಗಳನ್ನು ಪರಿಶೀಲಿಸಿ ಸ್ಕ್ರೀನ್‌ನ ಕೆಳಭಾಗದಲ್ಲಿರುವ ಲಭ್ಯವಿಲ್ಲ ವಿಭಾಗದಲ್ಲಿ ಪಟ್ಟಿ ಮಾಡಲಾಗಿದೆ.

  3. ಪ್ರತಿ ಐಟಮ್‌ಗೆ ಸಂಬಂಧಿಸಿದ ಎಲ್ಲಾ ಪರ್ಯಾಯಗಳನ್ನು ಪರಿಶೀಲಿಸುವವರೆಗೆ ಹಂತ 2 ಅನ್ನು ಪುನರಾವರ್ತಿಸಿ, ನಂತರ ಲೈಬ್ರರಿಗೆ [ಐಟಮ್‌ಗಳನ್ನು] ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ.

    ಗಮನಿಸಿ: ನಿಮ್ಮ ಪರ್ಯಾಯ ಹೊಂದಾಣಿಕೆಗಳನ್ನು ಒಂದೇ ಸೆಶನ್‌ನಲ್ಲಿ ಪರಿಶೀಲಿಸುವುದನ್ನು ನಿಮಗೆ ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ, ನೀವು ಇಲ್ಲಿಯವರೆಗೆ ಆಯ್ಕೆ ಮಾಡಿದ ಹೊಂದಾಣಿಕೆಗಳನ್ನು ಸಮ್ಮತಿಸಲು ಯಾವುದೇ ಸಮಯದಲ್ಲಿ ಲೈಬ್ರರಿಗೆ [ಐಟಮ್‌ಗಳನ್ನು] ಸೇರಿಸಿ ಎಂಬುದನ್ನು ಟ್ಯಾಪ್ ಮಾಡಿ. ನೀವು ಆರಂಭಿಕ ವರ್ಗಾವಣೆಗೆ ಹಿಂತಿರುಗಿ 30 ದಿನಗಳ ಒಳಗೆ ಅದನ್ನು ಪೂರ್ಣಗೊಳಿಸಬಹುದು, ಆದರೆ ನೀವು ಹೊಸ ವರ್ಗಾವಣೆಯನ್ನು ಪ್ರಾರಂಭಿಸುವ ಮೊದಲು ಆ ವರ್ಗಾವಣೆಯಲ್ಲಿರುವ ಎಲ್ಲಾ ಪರ್ಯಾಯಗಳನ್ನು ಪರಿಶೀಲಿಸುವುದನ್ನು ಪೂರ್ಣಗೊಳಿಸಬೇಕು. ನೀವು ಸಂಗೀತ ಆ್ಯಪ್ ಸೆಟ್ಟಿಂಗ್ಸ್‌ನಲ್ಲಿ ಪ್ರಸ್ತುತ ವರ್ಗಾವಣೆಯನ್ನು ಪರಿಶೀಲಿಸಿ ಎಂಬುದನ್ನು ನೋಡಿದರೆ, ಈ ಹಿಂದೆ ವರ್ಗಾಯಿಸಿದ ಪರಿಶೀಲಿಸಬೇಕಾದ ಸಂಗೀತವನ್ನು ನೀವು ಹೊಂದಿದ್ದೀರಿ ಎಂದರ್ಥ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.