ಈ ನಿಯಂತ್ರಣವನ್ನು ಮಾರ್ಪಡಿಸುವುದರಿಂದ ಈ ಪುಟವು ಸ್ವಯಂಚಾಲಿತವಾಗಿ ಅಪ್‌ಡೇಟ್ ಆಗುತ್ತದೆ

iPhoneನಲ್ಲಿನ Freeform ಆ್ಯಪ್‌ನಲ್ಲಿ ಸ್ಥಿರವಾದ ಶೈಲಿಗಳು ಮತ್ತು ಫಾರ್ಮ್ಯಾಟಿಂಗ್ ಅನ್ನು ಅನ್ವಯಿಸುವುದು

ನಿಮ್ಮ ಸ್ಟಿಕಿ ಟಿಪ್ಪಣಿಗಳು, ಆಕಾರಗಳು ಅಥವಾ ಪಠ್ಯ ಬಾಕ್ಸ್‌ಗಳಲ್ಲಿನ ಪಠ್ಯವು Freeformನಲ್ಲಿ ಸ್ಥಿರವಾದ ನೋಟವನ್ನು ಹೊಂದಿರಬೇಕೆಂದು ನೀವು ಬಯಸಿದಾಗ—ಉದಾಹರಣೆಗೆ, ಫಾಂಟ್, ಗಾತ್ರ ಮತ್ತು ಬಣ್ಣ—ನೀವು ಒಂದು ಐಟಂನಿಂದ ಶೈಲಿಯನ್ನು ಕಾಪಿ ಮಾಡಬಹುದು ಮತ್ತು ಅದನ್ನು ಇನ್ನೊಂದರಲ್ಲಿ ಪೇಸ್ಟ್ ಮಾಡಬಹುದು. ನೀವು ಶೈಲಿಗಳನ್ನು ಸಹ ಸೇವ್ ಮಾಡಬಹುದು.

  1. ನಿಮ್ಮ iPhone ನಲ್ಲಿರುವ Freeform ಆ್ಯಪ್‌ಗೆ ಹೋಗಿ.

  2. ಬೋರ್ಡ್‌ನಲ್ಲಿರುವ ಐಟಮ್ ಅನ್ನು ಟ್ಯಾಪ್ ಮಾಡಿ ಮತ್ತು ಫಾರ್ಮ್ಯಾಟಿಂಗ್‌ಗಲ್ಲಿ ಯಾವುದೇ ಹೊಂದಾಣಿಕೆಗಳನ್ನು ಮಾಡಿ—ಆಗ ಅದು ನೀವು ಕಾಪಿ ಮಾಡಲು ಬಯಸುವ ಶೈಲಿಯನ್ನು ಹೊಂದಿರುತ್ತದೆ.

  3. ನಿಮಗೆ ಇಷ್ಟವಾದ ಶೈಲಿಯಲ್ಲಿ ಫಾರ್ಮ್ಯಾಟ್ ಮಾಡಲಾದ ಐಟಮ್ ಇದ್ದಾಗ, ಅದರ ಫಾರ್ಮ್ಯಾಟಿಂಗ್ ಟೂಲ್‌ಗಳನ್ನು ತೋರಿಸಲು ಅದನ್ನು ಟ್ಯಾಪ್ ಮಾಡಿ.

  4. ಕೆಳಭಾಗದಲ್ಲಿರುವ ಫಾರ್ಮ್ಯಾಟಿಂಗ್ ಟೂಲ್‌ಗಳಲ್ಲಿ ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ಶೈಲಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಶೈಲಿಯನ್ನು ಕಾಪಿ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

  5. ನೀವು ಯಾವುದರ ಶೈಲಿಯನ್ನು ಬದಲಾಯಿಸಲು ಬಯಸುತ್ತೀರೋ ಆ ಐಟಂಗಾಗಿ ಫಾರ್ಮ್ಯಾಟಿಂಗ್ ಟೂಲ್‌ಗಳನ್ನು ಆಯ್ಕೆಮಾಡಲು ಮತ್ತು ತೋರಿಸಲು ಟ್ಯಾಪ್ ಮಾಡಿ.

  6. ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ಶೈಲಿ ಎಂಬುದನ್ನು ಟ್ಯಾಪ್ ಮಾಡಿ, ನಂತರ ಶೈಲಿಯನ್ನು ಪೇಸ್ಟ್ ಮಾಡಿ ಎಂಬುದನ್ನು ಟ್ಯಾಪ್ ಮಾಡಿ.

    ನೀವು ಶೈಲಿಯನ್ನು ಪೇಸ್ಟ್ ಮಾಡುತ್ತಿರುವ ಐಟಮ್ ಅನ್ನು ಅವಲಂಬಿಸಿ, ಫಾಂಟ್‌ಗಳು, ಲೈನ್‌ ತೂಕ ಅಥವಾ ಬಣ್ಣವನ್ನು ಹೊಂದಿಸಲಾಗುತ್ತದೆ.

    ಲಿಂಕ್ ಮಾಡಲಾದ ಅಥವಾ ಇರಿಸಲಾದ ಫೈಲ್‌ಗಳಿಗಾಗಿ, ಪೇಸ್ಟ್ ಮಾಡಲಾದ ಶೈಲಿಗಳು, ಮೂಲೆಗಳು ಮತ್ತು ಶಾಡೋಗಳನ್ನು ಅಪ್‌ಡೇಟ್ ಮಾಡುತ್ತವೆ.

ಸಲಹೆ: ಐಟಮ್ ಒಂದರ ಶೈಲಿಯು ನಿಮಗೆ ಇಷ್ಟವಾದರೆ, ನೀವು ಅದರ ಶೈಲಿಯನ್ನು ಸೇವ್ ಮಾಡಬಹುದು. ನಂತರ, ನೀವು ಪ್ರತಿ ಬಾರಿ ೊಅಂತಹ ಇನ್ನೊಂದು ಐಟಮ್ ಅನ್ನು ನಿಮ್ಮ ಬೋರ್ಡ್‌ಗೆ ಸೇರಿಸಿದಾಗ, ಅದು ಆ ಸೇವ್ ಮಾಡಲಾದ ಶೈಲಿಯನ್ನು ಬಳಸುತ್ತದೆ. ಪಠ್ಯ ಬಾಕ್ಸ್ ಅನ್ನು ಆಯ್ಕೆಮಾಡಲು ಟ್ಯಾಪ್ ಮಾಡಿ, ಕೆಳಭಾಗದಲ್ಲಿರುವ ಫಾರ್ಮ್ಯಾಟಿಂಗ್ ಟೂಲ್‌ಗಳಲ್ಲಿ ಇನ್ನಷ್ಟು ಬಟನ್ ಅನ್ನು ಟ್ಯಾಪ್ ಮಾಡಿ, ಇನ್ಸಾರ್ಟ್ ಶೈಲಿಯಾಗಿ ಸೇವ್ ಮಾಡಿ ಎಂಬುದನ್ನು ಆಯ್ಕೆಮಾಡಿ.

Morty Proxy This is a proxified and sanitized view of the page, visit original site.
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.