ನಿಮ್ಮ iPhone ಅಥವಾ iPad ನಲ್ಲಿ ಇಮೇಲ್‌ ಕಳುಹಿಸಲು ನಿಮಗೆ ಸಾಧ್ಯವಾಗದಿದ್ದರೆ

ನಿಮ್ಮ iPhone ಅಥವಾ iPad ನಲ್ಲಿ Mail ಆ್ಯಪ್‌ನಿಂದ ಇಮೇಲ್‌ ಕಳುಹಿಸಲು ನಿಮಗೆ ಸಾಧ್ಯವಾಗದಿದ್ದರೆ, ನೀವು ಒಂದಷ್ಟು ಪರಿಹಾರಗಳನ್ನು ಪ್ರಯತ್ನಿಸಬಹುದು.

ನೀವು ಪ್ರಾರಂಭಿಸುವ ಮುನ್ನ

ನೀವು ಕೆಲವು ಸಂಗತಿಗಳನ್ನು ಮನಸ್ಸಿನಲ್ಲಿಟ್ಟುಕೊಳ್ಳಬೇಕು ಮತ್ತು ಪರಿಶೀಲಿಸಬೇಕು:

ಕಳುಹಿಸದಿರುವ ಇಮೇಲ್‌ ಅನ್ನು ನೋಡಲು ಔಟ್‌ಬಾಕ್ಸ್‌ ಅನ್ನು ಪರಿಶೀಲಿಸಿ

ನಿಮ್ಮ ಇಮೇಲ್‌ ಅನ್ನು ಕಳುಹಿಸಲಾಗಿಲ್ಲ ಎಂಬ ಸಂದೇಶ ನಿಮಗೆ ಬಂದರೆ, ಆ ಇಮೇಲ್‌ ಔಟ್‌ಬಾಕ್ಸ್‌ಗೆ ಹೋಗುತ್ತದೆ ಎಂದರ್ಥ. ಈ ಹಂತಗಳ ಮೂಲಕ ನಿಮ್ಮ ಔಟ್‌ಬಾಕ್ಸ್ ಅನ್ನು ಪರಿಶೀಲಿಸಿ ಮತ್ತು ಇಮೇಲ್‌ ಅನ್ನು ಮತ್ತೊಮ್ಮೆ ಕಳುಹಿಸಲು ಪ್ರಯತ್ನಿಸಿ:

  1. Mail ನಲ್ಲಿ, ನಿಮ್ಮ ಮೇಲ್‌ಬಾಕ್ಸ್‌ಗಳ ಪಟ್ಟಿಗೆ ಹೋಗಿ.

  2. ಔಟ್‌ಬಾಕ್ಸ್‌ ಅನ್ನು ಟ್ಯಾಪ್‌ ಮಾಡಿ. ನಿಮಗೆ ಔಟ್‌ಬಾಕ್ಸ್‌ ಕಾಣಿಸದಿದ್ದರೆ, ನಿಮ್ಮ ಇಮೇಲ್‌ ಅನ್ನು ಕಳುಹಿಸಲಾಗಿದೆ ಎಂದರ್ಥ.

    iOS ನಲ್ಲಿನ ಮೇಲ್‌ಬಾಕ್ಸ್‌ಗಳ ಪುಟದಲ್ಲಿ, ಕಳುಹಿಸದಿರುವ ಇಮೇಲ್‌ ಸಂದೇಶಗಳನ್ನು ನೋಡಲು ನೀವು ಔಟ್‌ಬಾಕ್ಸ್‌ ಅನ್ನು ಪರಿಶೀಲಿಸಬಹುದು.
  3. ಔಟ್‌ಬಾಕ್ಸ್‌ನಲ್ಲಿರುವ ಇಮೇಲ್‌ ಅನ್ನು ಟ್ಯಾಪ್‌ ಮಾಡಿ. ಸ್ವೀಕರಿಸುವವರ ಇಮೇಲ್‌ ವಿಳಾಸ ಸರಿಯಾಗಿದೆಯೇ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

  4. ಕಳುಹಿಸಿ ಎಂಬುದನ್ನು ಟ್ಯಾಪ್‌ ಮಾಡಿ.

ನಿಮ್ಮ ಇಮೇಲ್‌ ವಿಳಾಸ ಹಾಗೂ ಪಾಸ್‌ವರ್ಡ್‌ ಅನ್ನು ಪರಿಶೀಲಿಸಿ

ನಿಮ್ಮ ಇಮೇಲ್‌ ಖಾತೆಗಾಗಿ ಪಾಸ್‌ವರ್ಡ್‌ ನಮೂದಿಸುವಂತೆ Mail ನಿಮಗೆ ಹೇಳಿದರೆ, ನಿಮ್ಮ ಪಾಸ್‌ವರ್ಡ್‌ ಸರಿಯಾಗಿದೆ ಎಂದು ಖಾತ್ರಿಪಡಿಸಿಕೊಳ್ಳಿ. ನಿಮ್ಮ ಇಮೇಲ್‌ ವಿಳಾಸ ಮತ್ತು ಪಾಸ್‌ವರ್ಡ್‌ ಅನ್ನು ಪರಿಶೀಲಿಸಲು, ನಿಮ್ಮ ಇಮೇಲ್‌ ಪೂರೈಕೆದಾರರ ವೆಬ್‌ಸೈಟ್‌ಗೆ ಸೈನ್‌ ಇನ್‌ ಮಾಡಿ.

ನೀವು ಬಳಕೆದಾರರ ಹೆಸರು ಅಥವಾ ಪಾಸ್‌ವರ್ಡ್‌ಗೆ ಸಂಬಂಧಿಸಿದ ದೋಷವನ್ನು ಈಗಲೂ ಎದುರಿಸುತ್ತಿದ್ದರೆ, ನಿಮ್ಮ ಇಮೇಲ್‌ ಪೂರೈಕೆದಾರರು ಅಥವಾ ಸಿಸ್ಟಂ ನಿರ್ವಾಹಕರನ್ನು ಸಂಪರ್ಕಿಸಿ.

ನಿಮ್ಮ ಇಮೇಲ್‌ ಪೂರೈಕೆದಾರರು ಅಥವಾ ಸಿಸ್ಟಂ ನಿರ್ವಾಹಕರನ್ನು ಸಂಪರ್ಕಿಸಿ

  1. ನಿಮ್ಮ ಇಮೇಲ್‌ ಪೂರೈಕೆದಾರರನ್ನು ಸಂಪರ್ಕಿಸಿ ಅಥವಾ ಅವರ ಸೇವೆ ಸ್ಥಗಿತಗೊಂಡಿದೆಯೇ ಎಂಬುದನ್ನು ನೋಡಲು ಅವರ ಸ್ಟೇಟಸ್‌ ವೆಬ್‌ಪುಟವನ್ನು ಪರಿಶೀಲಿಸಿ.

  2. ನಿಮ್ಮ ಇಮೇಲ್‌ ಖಾತೆಗೆ ಸಂಬಂಧಿಸಿದಂತೆ ನೀವು ಎರಡು-ಹಂತದ ಪರಿಶೀಲನೆಯಂತಹ ಭದ್ರತಾ ಫೀಚರ್‌ಗಳು ಅಥವಾ ನಿರ್ಬಂಧಗಳನ್ನು ಆನ್‌ ಮಾಡಿದ್ದೀರಾ ಎಂದು ನಿಮ್ಮ ಇಮೇಲ್‌ ಪೂರೈಕೆದಾರರು ಅಥವಾ ಸಿಸ್ಟಂ ನಿರ್ವಾಹಕರನ್ನು ಕೇಳಿ. ನಿಮ್ಮ ಸಾಧನದಲ್ಲಿ ಮೇಲ್‌ ಕಳುಹಿಸಲು ಮತ್ತು ಸ್ವೀಕರಿಸಲು ನಿಮಗೆ ವಿಶೇಷ ಪಾಸ್‌ವರ್ಡ್‌ ಬೇಕಾಗಬಹುದು ಅಥವಾ ನಿಮ್ಮ ಇಮೇಲ್‌ ಪೂರೈಕೆದಾರರಿಂದ ದೃಢೀಕರಣವನ್ನು ವಿನಂತಿಸಿಕೊಳ್ಳಬೇಕಾಗಬಹುದು.

  3. ನಿಮ್ಮ ಇಮೇಲ್‌ ಪೂರೈಕೆದಾರರು ಅಥವಾ ಸಿಸ್ಟಂ ನಿರ್ವಾಹಕರ ಜೊತೆಗಿನ ನಿಮ್ಮ ಇಮೇಲ್‌ ಖಾತೆ ಸೆಟ್ಟಿಂಗ್‌ಗಳನ್ನು ಪರಿಶೀಲಿಸಿ ಮತ್ತು ಅವೆಲ್ಲವೂ ಸರಿಯಾಗಿವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

ನಿಮ್ಮ ಇಮೇಲ್‌ ಖಾತೆಯನ್ನು ತೆಗೆದುಹಾಕಿ ಹಾಗೂ ಅದನ್ನು ಮತ್ತೊಮ್ಮೆ ಸೆಟಪ್ ಮಾಡಿ

  1. ನಿಮ್ಮ ಕಂಪ್ಯೂಟರ್‌ನಲ್ಲಿ, ನಿಮ್ಮ ಇಮೇಲ್‌ ಪೂರೈಕೆದಾರರ ವೆಬ್‌ಸೈಟ್‌ಗೆ ಸೈನ್‌ ಇನ್‌ ಮಾಡಿ. ನಿಮ್ಮ ಎಲ್ಲಾ ಇಮೇಲ್‌ಗಳು ಅಲ್ಲಿವೆ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ ಅಥವಾ ನಿಮ್ಮ ಇಮೇಲ್‌ ಅನ್ನು iOS ಅಥವಾ iPadOS ಸಾಧನವನ್ನು ಹೊರತುಪಡಿಸಿ ಬೇರೆ ಎಲ್ಲಾದರೂ ಸೇವ್ ಮಾಡಿದ್ದೀರಿ ಎಂಬುದನ್ನು ಖಾತ್ರಿಪಡಿಸಿಕೊಳ್ಳಿ.

  2. ನಿಮ್ಮ ಸಾಧನದಲ್ಲಿ ಸೆಟ್ಟಿಂಗ್‌ಗಳು ಎಂಬಲ್ಲಿಗೆ ಹೋಗಿ ಮತ್ತು ಆ್ಯಪ್‌ಗಳು ಅನ್ನು ಟ್ಯಾಪ್ ಮಾಡಿ. Mail ಎಂಬುದನ್ನು ಟ್ಯಾಪ್ ಮಾಡಿ, ನಂತರ Mail ಖಾತೆಗಳು ಎಂಬುದನ್ನು ಟ್ಯಾಪ್ ಮಾಡಿ.

  3. ನೀವು ತೆಗೆದುಹಾಕಲು ಬಯಸುವ ಇಮೇಲ್ ಖಾತೆಯನ್ನು ಟ್ಯಾಪ್‌ ಮಾಡಿ.

  4. ಖಾತೆಯನ್ನು ಅಳಿಸಿ ಎಂಬುದನ್ನು ಟ್ಯಾಪ್‌ ಮಾಡಿ.

  5. ನಿಮ್ಮ ಖಾತೆಯನ್ನು ಮತ್ತೊಮ್ಮೆ ಸೇರಿಸಿ.

ಈ ಲೇಖನದಲ್ಲಿರುವ ಹಂತಗಳಿಂದ ಸಹಾಯವಾಗದಿದ್ದರೆ, ಹೆಚ್ಚಿನ ಮಾಹಿತಿಗಾಗಿ ನಿಮ್ಮ ಇಮೇಲ್‌ ಸೇವಾ ಪೂರೈಕೆದಾರರನ್ನು ಸಂಪರ್ಕಿಸಿ.

ಇನ್ನಷ್ಟು ಸಹಾಯ ಬೇಕೇ?

ಏನಾಗುತ್ತಿದೆ ಎಂಬುದರ ಕುರಿತು ನಮಗೆ ಹೇಳಿ, ನೀವು ಮುಂದೆ ಏನು ಮಾಡಬಹುದು ಎಂಬುದರ ಕುರಿತು ನಾವು ಸಲಹೆ ನೀಡುತ್ತೇವೆ.

ಸಲಹೆಗಳನ್ನು ಪಡೆಯಿರಿ

ಪ್ರಕಟಿತ ದಿನಾಂಕ: 
ಉಪಯುಕ್ತವಾಗಿದೆಯೇ?
ಅಕ್ಷರ ಮಿತಿ: 250
ಗರಿಷ್ಠ ಅಕ್ಷರ ಮಿತಿಯು 250 ಆಗಿದೆ.
ನಿಮ್ಮ ಫೀಡ್‌ಬ್ಯಾಕ್‌ಗಾಗಿ ಧನ್ಯವಾದಗಳು.
Morty Proxy This is a proxified and sanitized view of the page, visit original site.